ನೀವು ಒಂದು ಅಂಶವನ್ನು ಗಮನಿಸಿದ್ದೀರಾ? ಕೆಲವರಿಗೆ ಮಾತ್ರ ಸೊಳ್ಳೆ ತುಂಬಾನೇ ಕಚ್ಚುತ್ತದೆ. ಇವರನ್ನೇ ಟಾರ್ಗೆಟ್ ಮಾಡಿದಂತೆ ಕಚ್ಚುವಂತೆ, ಏಕೆ? ತಮಾಷೆಗೆ ಅವರ ರಕ್ತ ತುಂಬಾ ಸಿಹಿ ಹಾಗಾಗಿ ಸೊಳ್ಳೆಗೆ ಇಷ್ಟ, ಆ ಕಾರಣಕ್ಕೆ ಅವರನ್ನೇ ಕಚ್ಚಲಾಗುವುದು ಎಂದು ಹೇಳುತ್ತಾರೆ, ಆದರೆ ಇದರ ಹಿಂದಿರುವ ನಿಜವಾದ ಕಾರಣವೇನು ಎಂಬುವುದು ಗೊತ್ತೇ? ಹಾಗಾದರೆ ನೋಡೋಣ ಬನ್ನಿ:
ಸೊಳ್ಳೆ ಕೆಲವರಿಗೆ ಮಾತ್ರ ತುಂಬಾ ಕಚ್ಚುವುದು ಏಕೆ?
ಸೊಳ್ಳೆ ಏಕೆ ಕೆಲವರಿಗೆ ತುಂಬಾನೇ ಕಚ್ಚುತ್ತದೆ ಎಂಬುವುದನ್ನು ಒಂದು ಪ್ರಸಿದ್ಧ ಥಿಯರಿ
ವಿವರಿಸಿದೆ. ಈ ಥಿಯರಿಗೆ ಪೂರಕವಾಗಿ ರಾಕ್‌ಫೆಲ್ಲರ್ ಯನಿವರ್ಸಿಟಿಯ ಸಂಶೋಧಕರು ದೇಹದ
ವಾಸನೆ ಗ್ರಹಿಸಿ ಹೆಣ್ಣು ಸೊಳ್ಳೆ ನಮ್ಮನ್ನು ಕಚ್ಚುತ್ತದೆ ಎಂದು ಹೇಳಿದೆ. ನಮ್ಮ ದೇಹ
ಸೂಸುವ ವಾಸನೆಗೂ ಸೊಳ್ಳೆ ಕಚ್ಚುವುದಕ್ಕೂ ಸಂಬಂಧವಿದೆ ಎಂದು ಮೂರು ವರ್ಷಗಳ ಅಧ್ಯಯನ
ನಡೆಸಿ ಇಂಥದ್ದೊಂದು ವರದಿ ಸಿದ್ಧ ಪಡಿಸಲಾಯಿತು.
ಯಾರಿಗೆ ಸೊಳ್ಳೆ ತುಂಬಾ ಕಚ್ಚುತ್ತದೆ
ಯಾರ ದೇಹ ಕಾರ್ಬೋಕ್ಸಿಲಿಕ್ ಆಮ್ಲ (carboxylic acids) ಹೆಚ್ಚು ಉತ್ಪತ್ತಿ ಮಾಡುತ್ತದೋ
ಅವರ ದೇಹದ ವಾಸನೆ ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆಯನ್ನು ತುಂಬಾನೇ ಆಕರ್ಷಿಸುತ್ತದೆ.
ಇಂಥವರನ್ನು ಸೊಳ್ಳೆ ಬಂದು ತುಂಬಾನೇ ಕಚ್ಚುತ್ತದೆ.
ಇಂಥವರು ಸೊಳ್ಳೆ ಕಾಟದಿಂದ ಪಾರಾಗುವುದು ಹೇಗೆ?
ಅಧ್ಯಯನಗಳ ಪ್ರಕಾರ ಸೊಳ್ಳೆಗಳು ಈ ರೀತಿಯ ಮೈ ವಾಸನೆಯ (ಅಧಿಕ CO2 ಬಿಡುಗಡೆ ಮಾಡುವ ದೇಹ) ದ ಕಡೆಗೆ ಆಕರ್ಷಿತವಾಗುವುದನ್ನು ತಡೆಗಟ್ಟುವುದು ಕಷ್ಟ, ಆದರೆ ತುಂಬು ತೋಳಿನ ಬಟ್ಟೆ ಧರಿಸುವುದು, ಸೊಳ್ಳೆ ಕಚ್ಚದಿರಲು, ಕ್ರೀಮ್, ಜೆಲ್ ಬಳಸುವ ಮೂಲಕ ಸೊಳ್ಳೆ ಕಾಟ ತಡೆಯಬಹುದು.
ನಿಮಗೆ ತುಂಬಾ ಸೊಳ್ಳೆ ಕಚ್ಚುತ್ತಿದ್ದಾಗ ಏಕೆ ನನಗೆ ಮಾತ್ರ ಸೊಳ್ಳೆ ಕಾಟ ಜಾಸ್ತಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಬೇಕು ಅಲ್ವಾ?