ಪೆರ್ಲ : ಶೇಣಿ ಮಣಿಯಂಪಾರೆಯ ಶ್ರೀಅಯ್ಯಪ್ಪ ಭಜನಾ ಮಂದಿರದ ಗರ್ಭಗುಡಿ ಪುನರ್ ನಿರ್ಮಾಣ ಕಾರ್ಯದಂಗವಾಗಿ ಪುನಃ ಪ್ರತಿಷ್ಠೆ ಹಾಗೂ ಮಂದಿರದ ವಾರ್ಷಿಕೋತ್ಸವ ಡಿ.25ರಂದು ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಮಂದಿರದ ಗುರುಸ್ವಾಮಿ ನಾರಾಯಣ ಮೂಲ್ಯ ಬಾರೆದಳ ಅವರ ವಿಶೇಷ ಪ್ರಾರ್ಥನೆಯ ಬಳಿಕ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಮಂದಿರದ ಅಧ್ಯಕ್ಷ ರವೀಂದ್ರನಾಥ ನಾಯಕ್ ತೋಟದಮನೆ, ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ,ಸದಾಶಿವ ಆಚಾರ್ಯ ಶೇಣಿ, ರವೀಂದ್ರ ಪೂಜಾರಿ, ರಘರಾಮ ಬೋರ್ಕರ್,ಶಶಿರೇಖ ಟೀಚರ್, ಆಶಾಲತಾ,ಹೇಮಾವತಿ ಮಣಿಯಂಪಾರೆ,ಅರುಣಾಕ್ಷಿ ಶೇಣಿ,ಶ್ರೀಲೇಖಾ ಮಣಿಯಂಪಾರೆ ಮೊದಲಾದವರು ಭಾಗವಹಿಸಿದ್ದರು.
ಡಿ.25ರಂದು ಬೆಳಿಗ್ಗೆ ಗಂಟೆ 7.50ರಿಂದ 8.20ರ ಒಳಗಿನ ಧನು ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾ ಚಿತ್ರದ ಪುನಃ ಪ್ರತಿμÉ್ಠಯು ವೇದಮೂರ್ತಿ ಶ್ರೀಚಂದ್ರಶೇಖರ ನಾವಡ ಬಜಕೂಡ್ಲು ಇವರ ನೇತೃತ್ವದಲ್ಲಿ ವಿವಿಧ ವೈದಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀನಾರಾಯಣ ಗುರುಸ್ವಾಮಿ ಬಾರೆದಳ ಇವರ ದಿವ್ಯ ಹಸ್ತದಿಂದ ನೆರವೇರಲಿರುವುದು.ಬಳಿಕ ಬೆಳಗ್ಗೆ 9 ರಿಂದ ಶ್ರೀಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆಗೆ 12 ಗಂಟೆಗೆ : ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ,ಸಂಜೆ 7 ಗಂಟೆಯಿಂದ ಶ್ರೀದುರ್ಗಾಪರಮೇಶ್ವರೀ ಭಜನ ಮಂದಿರ ಮಣಿಯಂಪಾರೆಯಿಂದ ಉಲ್ಪೆ ಮೆರವಣೆಗೆ, ಶ್ರಿದೇವಿ ಭಜನ ಸಂಘ,ದಳ-ಕಲ್ಲಡ್ಕ ಇವರಿಂದ ಭಜನೆ,ತತ್ವಮಸಿ ಕುಣಿತ ಭಜನಾ ತಂಡ ಶೇಣಿ - ಮಣಿಯಂಪಾರೆ ಇವರಿಂದ ಕುಣಿತ ಭಜನೆ ,ರಾತ್ರೆ ಗಂಟೆ 9.30ರಿಂದ : ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಶೇಣಿ ಮಣಿಯಂಪಾರೆ ಶ್ರೀಅಯ್ಯಪ್ಪ ಭಜನಾ ಮಂದಿರ ಪುನಃ ಪ್ರತಿಷ್ಠೆ ಹಾಗೂ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
0
ಡಿಸೆಂಬರ್ 04, 2022
Tags