ಕಾಸರಗೋಡು: ಪ್ರಾಕೃತಿಕ ವಿಕೋಪದಿಂದ ಧರಾಶಾಯಿಯಾದ ಕಾಸರಗೋಡು ಕಡಪ್ಪುರ 37ನೇ ವಾರ್ಡು ನಿವಾಸಿ ಕಾತ್ರ್ಯಾಯಿನಿ ಅಮ್ಮ ಅವರ ಹೆಂಚುಹಾಸಿನ ಮನೆಯ ದುರಸ್ತಿಕಾರ್ಯವನ್ನು ಕೇರಳಪ್ರದೇಶ್ ಮತ್ಸ್ಯ ಕಾರ್ಮಿಕರ ಸಂಘ್(ಬಿಎಂಎಸ್)ವತಿಯಿಂದ ದುರಸ್ತಿಗೊಳಿಸಲಾಯಿತು.
ಬಿಎಂಎಸ್ ಕಾರ್ಯಕರ್ತರು ಶ್ರಮದಾನದ ಮೂಲಕ ದುರಸ್ತಿಕಾರ್ಯ ಕೈಗೊಂಡಿದ್ದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ದಿನೇಶ್, ಅಧ್ಯಕ್ಷ ಶರತ್, ಕೋಶಾಧಿಕಾರಿ ರಮೇಶನ್, ನಗರ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್, ರತೀಶನ್, ವಿಭಾಗ ಕಾರ್ಯದರ್ಶಿ ರಂಜು, ಶಶಿ, ರತೀಶನ್,, ಜನಾರ್ದನನ್ ದುರಸ್ತಿ ಕಾಮಗಾರಿಯಲ್ಲಿ ಕೈಜೋಡಿಸಿದರು.
ಕುಸಿದ ಮನೆಯ ದುರಸ್ತಿ ನಡೆಸಿದ ಬಿಎಂಎಸ್ ಕಾರ್ಯಕರ್ತರು
0
ಡಿಸೆಂಬರ್ 27, 2022
Tags