ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕ್ರಿಸ್ಮಸ್ ಪ್ರಯುಕ್ತ ಏರ್ಪಡಿಸಿದ ಮೆರವಣಿಗೆಯಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬೀನ, ಪಂಚಾಯತಿ ಸದಸ್ಯ ಶರೀಫ್. ಟಿ.ವಿ. ಹಾಗೂ ಹಾಗೂ ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ.ಭಾಗಿಯಾಗಿ ಮೆರಗನ್ನು ಹೆಚ್ಚಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾ.ಪಂ.ಅಧ್ಯಕ್ಷೆ ರುಬೀನ ಉದ್ಘಾಟಿಸಿದರು. ಪಂಚಾಯತಿ ಸದಸ್ಯ ಶರೀಫ್ ಟಿ.ಯಂ. ಹಾಗೂ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ. ವಿ ಶುಭಾಶಂಸನೆಗೈದರು. ಈ ಸಂದರ್ಭ ವಿದ್ಯಾರ್ಥಿಗಳ ಹಸ್ತಪ್ರತಿ ಬಿಡುಗಡೆ ನಡೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ರುಬೀನ ಅವರನ್ನು ಶಾಲು ಹೊದಿಸಿ ಫಲ ಪುಷ್ಪ ನೀಡಿ ಅಭಿನಂದಿಸಲಾಯಿತು. ಇತ್ತೀಚೆಗೆ ವರ್ಗಾವಣೆಗೊಂಡ ಅಧ್ಯಾಪಿಕೆ ಅನಿತಕುಮಾರಿಯವರನ್ನು ಸ್ಮರಣಿಕೆ ನೀಡಿ ಶಾಲಾಶಿಕ್ಷಕ ಸಮೂಹ ಹಾಗೂ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ ವಿ. ಅವರ ಸಮ್ಮುಖದಲ್ಲಿ ಗೌರವಿಸಲಾಯಿತು. ಶಾಲಾ ಮಾತೃಸಂಘದ ಅಧ್ಯಕ್ಷೆ ರಸೀನಾ ಉಪಸ್ಥಿತರಿದ್ದರು.
ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಸ್ವಾಗತಿಸಿ, ಅಬ್ಸ ಟೀಚರ್ ವಂದಿಸಿದರು. ಶಿಕ್ಷಕ ಫಿರೋಜ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ರೇವತಿ ದಿನದ ಮಹತ್ವವನ್ನು ತಿಳಿಸಿದರು.
ಮುಳಿಂಜದಲ್ಲಿ ಕ್ರಿಸ್ಮಸ್ ಆಚರಣೆ
0
ಡಿಸೆಂಬರ್ 27, 2022