ಕುಂಬಳೆ: ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಆರಂಭಗೊಂಡಿದೆ. ಕಾಸರಗೋಡು ಬ್ಲಾಕ್ ಪಂಚಾಯತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಕೀನಾ ಅಬ್ದುಲ್ಲಾ ಹಾಜಿ ಉದ್ಘಾಟಿಸಿದರು. ಕುಂಬಳೆ, ಮಧೂರು, ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 60 ಆಶಾ ಕಾರ್ಯಕರ್ತೆಯರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.
ಕೇರಳದ ಸಾರ್ವಜನಿಕ ಆರೋಗ್ಯ ಪ್ರವೃತ್ತಿಗಳಲ್ಲಿ ತರಬೇತಿ, ಆರೋಗ್ಯ ಚಟುವಟಿಕೆಗಳಲ್ಲಿ ಆಶಾ ಅವರ ಜವಾಬ್ದಾರಿ, ಹೊಸ ಯುಗದ ಸಾಂಕ್ರಾಮಿಕ ರೋಗಗಳು, ವಿಪತ್ತು ನಿರ್ವಹಣೆ, ಆರೋಗ್ಯ ವಿಮೆ, ಏಕ ಆರೋಗ್ಯ, ನವೀನ ಚಟುವಟಿಕೆಗಳು, ಹಿರಿಯ ನಾಗರಿಕರ ಆರೋಗ್ಯ, ಇ-ಸಂಜೀವಿನಿ ಟೆಲಿಮೆಡಿಸಿನ್ ಇತ್ಯಾದಿಗಳ ಬಗ್ಗೆ ಸಮಗ್ರ ತರಬೇತಿ ನಡೆಯಿತು. ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಪಿ.ಎಚ್.ಎನ್.ಕುಂಞಮಿ, ಕಿರಿಯ ಆರೋಗ್ಯ ನಿರೀಕ್ಷಕರಾದ ಸಿ.ಸಿ.ಬಾಲಚಂದ್ರನ್, ಎಸ್.ಜಿ.ರಾಬಿನ್ಸನ್, ಕಿರಿಯ ಸಾರ್ವಜನಿಕ ಆರೋಗ್ಯ ಶುಶ್ರೂಷಕಿಯರಾದ ಎಸ್.ಶಾರದ, ಕೆ.ಶಾಂತ, ಪಿಆರ್‍ಒ ಟಿ.ವಿ.ಕೀರ್ತಿ ಮಾತನಾಡಿದರು.
ಕುಂಬಳೆ ಸಿಎಚ್ ಸಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ತರಬೇತಿ
0
ಡಿಸೆಂಬರ್ 04, 2022
Tags