ತಿರುವನಂತಪುರಂ: ಸಾಜಿ ಚೆರಿಯನ್ ಅವರನ್ನು ಸಚಿವರನ್ನಾಗಿ ಮಾಡುವ ಕುರಿತು ರಾಜ್ಯಪಾಲರು ಕಾನೂನು ಸಲಹೆ ಕೇಳಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಾಜಿ ಚೆರಿಯನ್ ಅವರನ್ನು ಮರಳಿ ನೇಮಕ ಮಾಡಲು ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಕುರಿತು ರಾಜ್ಯಪಾಲರು ಸ್ಥಾಯಿ ಮಂಡಳಿಯಿಂದ ಕಾನೂನು ಸಲಹೆ ಕೇಳಿರುವರು.
ಸಾಜಿ ಚೆರಿಯನ್ ಅಸಾಂವಿಧಾನಿಕ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು.
ಜನವರಿ 4 ರಂದು ಸಾಜಿ ಚೆರಿಯನ್ ಪ್ರಮಾಣ ವಚನ ಸ್ವೀಕರಿಸಲು ಸರ್ಕಾರ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಸಮಯಾವಕಾಶ ಕೋರಿ ಸರ್ಕಾರ ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಸಾಜಿ ಚೆರಿಯನ್ ಅವರ ಸಂವಿಧಾನ ವಿರೋಧಿ ಭಾಷಣದ ಕುರಿತು ತಿರುವಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ವಿವಾದಾತ್ಮಕ ಭಾಷಣದ ನಂತರ ಸಾಜಿ ಚೆರಿಯನ್ ಕಳೆದ ಜುಲೈ 6 ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶುಕ್ರವಾರ ನಡೆದ ಸಿಪಿಎಂ ರಾಜ್ಯ ಸಮಿತಿ ಸಜಿ ಚೆರಿಯನ್ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲು ನಿರ್ಧರಿಸಿತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ. ವಿ ಗೋವಿಂದನ್ ಕೂಡ ಈ ಬಗ್ಗೆ ಖಚಿತಪಡಿಸಿದ್ದಾರೆ.
ಸಾಜಿ ಚೆರಿಯನ್ ಪ್ರಮಾಣ ವಚನ; ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಕಾನೂನು ಸಲಹೆ ಕೇಳಿದ ರಾಜ್ಯಪಾಲರು
0
ಡಿಸೆಂಬರ್ 31, 2022