ಕಾಸರಗೋಡು: ಮೊಗ್ರಾಲ್‍ನಲ್ಲಿ ಮೂರು ದಿವಸಗಳ ಕಾಲ ನಡೆದ ರಾಜ್ಯ ಸಬ್ ಜೂನಿಯರ್ ಬಾಲಕರ ಹಾಕಿ ಚಾಂಪಿಯನ್‍ಶಿಪ್‍ನಲ್ಲಿ ಮಲಪ್ಪುರಂ ಜಿಲ್ಲಾ ತಂಡ ಪ್ರಶಸ್ತಿ ಗೆದ್ದುಕೊಂಡಿತು.
ಆಲಪ್ಪುಳ ತಂಡವು ಅಂತಿಮ ಪಂದ್ಯದಲ್ಲಿ ಎರಡು ಗೋಲುಗಳಿಂದ ಸೋಲುಣಬೇಕಾಯಿತು. ತ್ರಿಶೂರ್ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ. ಮಲಪ್ಪುರಂನ ಗೋಲ್‍ಕೀಪರ್ ರಾಹುಲ್ ಕುಮಾರ್, ಅತುಲ್ ಶಾನ್, ಅಲಪ್ಪುಳದ ಅನೀಶ್ ಮಿನ್ಸ್ ಮತ್ತು ಎರ್ನಾಕುಲಂನ ನದೀಮ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ರಾಜ್ಯ ಹಾಕಿ ಕಾರ್ಯದರ್ಶಿ ಟಿ ಸೋಜಿ ಉದ್ಘಾಟಿಸಿದರು. ಟಿ.ಎಂ.ಶುಹೈಬ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಎಂ. ಅಚ್ಯುತನ್ ಮಾಸ್ಟರ್. ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಯೂಸುಫ್, ಹಮೀದ್, ಅಶ್ರಫ್ ಕಾರ್ಲ, ಎಂ ರಾಮ ಕೃಷ್ನನ್ ಮಾಸ್ಟರ್, ನಾಸಿರ್ ಮೊಗ್ರಾಲ್ ಮುಜೀಬ್ ಕಂಬಾರ್, ರಿಯಾಝ್ ಮೊಗ್ರಾಲ್, ಎ.ಕೆ.ಆರಿಫ್, ಕೆ.ವಿ ಯೂಸುಪ್, ಮೊಹಮ್ಮದ್ ಅಲಿ ಕುಂಬಳೆ, ನಾಸರ್ ಕಲ್ಲಂಗೈ, ಸಜೀವನ್ ಮಾಸ್ಟರ್ ಉಪಸ್ಥಿತರಿದ್ದರು. ಪ್ರಚಾರ ಸಮಿತಿ ಅಧ್ಯಕ್ಷ ಜೆಡ್ ಎ. ಮೊಗ್ರಾಲ್ ಸ್ವಾಗತಿಸಿದರು. ಪಿ.ವಿ.ಪವಿತ್ರನ್ ಮಾಸ್ಟರ್ ವಂದಿಸಿದರು.
ರಾಜ್ಯ ಸಬ್ ಜೂನಿಯರ್ ಬಾಲಕರ ಹಾಕಿ ಚಾಂಪ್ಯನ್‍ಶಿಪ್-ಮಲಪ್ಪುರಂ ತಂಡಕ್ಕೆ ಪ್ರಶಸ್ತಿ
0
ಡಿಸೆಂಬರ್ 11, 2022
Tags