ಕಾಸರಗೋಡು: ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆ ಹೆಸರನ್ನು ಅಂತಾರಾಷ್ಟ್ರಮಟ್ಟಕ್ಕೆ ಪರಿಚಯಿಸಿದವರಲ್ಲಿ ಯಕ್ಷಗಾನದ ಹಿರಿಯ ಕಲಾವಿದ, ಕುಂಬಳೆ ಸುಂದರ ರಆವ್ ಕ್ಯಾತನಾಮರಾಗಿದ್ದಾರೆ ಎಂದು 'ಸವಾಕ್'ಸಂಘಟನೆ ರಾಜ್ಯ ಸಮಿತಿ ಕೋಶಾಧಿಕಾರಿ ಎಂ. ಉಮೇಶ್ ಸಾಲ್ಯಾನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಲೈಬ್ರರಿ ಸಭಾಂಗಣದಲ್ಲಿ ಕೇರಳ ರಾಜ್ಯ ಕಲಾವಿದರ ಒಕ್ಕೂಟ(ಸವಾಕ್)ವತಿಯಿಂದ ಆಯೋಜಿಸಲಾದ ಕುಂಬಳೆ ಸುಂದರ ರಾವ್ ಶ್ರದ್ಧಾಂಜಲಿ ಸಭೆ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ಅರ್ಥಧಾರಿಯಾಗಿ, ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ, ಶಾಸಕರಾಗಿ ತಮ್ಮ ಪ್ರತಿ ಕ್ಷೇತ್ರದಲ್ಲೂ ನ್ಯಾಯೋಚಿತ ಸೇವೆ ಸಲ್ಲಿಸುವುದರ ಜತೆಗೆ, ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಯಕ್ಷಗಾನ ಕಲೆಗೆ ಹೊಸ ಆಯಾಮ ತಂದುಕೊಡುವಲ್ಲಿ ಶ್ರಮಿಸಿದವರಲ್ಲಿ ಕುಂಬಳೆ ಸುಂದರ ರಾವ್ ಅಗ್ರಗಣ್ಯರಾಗಿದ್ದಾರೆ ಎಂದು ತಿಳಿಸಿದರು.
ಯಕ್ಷಗಾನ ಕಲಾವಿದ ಅಪ್ಪಕುಞÂ ಮಣಿಯಾಣಿ, ಕಲಾವಿದರಾದ ನರಸಿಂಹ ಬಲ್ಲಾಳ್, ವಾಸು ಬಾಯಾರ್, ಚಂದ್ರಹಾಸ ಕಯ್ಯಾರ್, ಸನ್ನಿ ಆಗಸ್ಟಿನ್, ಭಾರತಿ ಬಾಬು, ಮೋಹಿನಿ ಕೊಪ್ಪಳ, ಕೆ.ಎಚ್ ಮಹಮ್ಮದ್, ಸತ್ಯನಾರಾಯಣ ಬಲ್ಲಾಳ್, ಶೈಜು, ನರೇಂದ್ರ, ದಿವಾಕರ ಅಶೋಕನಗರ, ದಯಾಪ್ರಸಾದ್ ಉಪಸ್ಥಿತರಿದ್ದರು.
ಕುಂಬಳೆ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿ ಧೀಮಂತ ಕಲಾವಿದ ಸುಂದರ ರಾವ್
0
ಡಿಸೆಂಬರ್ 06, 2022