ನವದೆಹಲಿ: ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಶೇಕಡ 168 ಕಡಿಮೆಯಾಗಿವೆ ಮತ್ತು ಎಡಪಂಥೀಯ ಉಗ್ರವಾದ ಕೃತ್ಯಗಳು 2015 ರಿಂದ ಶೇಕಡ 265 ಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೋಮವಾರ ಹೇಳಿದ್ದಾರೆ.
ಮೋದಿ ಸರ್ಕಾರ 'ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ'. ಸರ್ಕಾರವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದು, ಅದು ಖಚಿತ ಫಲಿತಾಂಶಗಳನ್ನು ನೀಡಿದೆ ಎಂದು ಠಾಕೂರ್ ಹೇಳಿದರು.
'2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ದಾಳಿ ನಡೆದಿತ್ತು. 2019 ರಲ್ಲಿ ಬಾಲಾಕೋಟ್ ವಾಯುದಾಳಿ ಪುಲ್ವಾಮಾ ಬಾಂಬ್ ದಾಳಿಗೆ ಪ್ರತ್ಯುತ್ತರವಾಗಿತ್ತು. ಆದ್ದರಿಂದ ಈ ಎಲ್ಲಾ ನಿರ್ಣಾಯಕ ಕ್ರಮಗಳು ಖಚಿತ ಫಲಿತಾಂಶಗಳನ್ನು ನೀಡಿವೆ ಎಂದು ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.
2014ರಿಂದ ಹಿಂಸಾಚಾರ ಶೇಕಡ 80 ಹಾಗೂ ನಾಗರಿಕರ ಸಾವು ಶೇಕಡ 89 ಕಡಿಮೆಯಾಗಿದೆ. 6 ಸಾವಿರ ಉಗ್ರರು ಶರಣಾಗಿದ್ದಾರೆ ಎಂದು ಅವರು ಹೇಳಿದರು.