ನವದೆಹಲಿ:ಧಾರ್ಮಿಕ ಮೆರವಣಿಗೆಗಳನ್ನು ಯಾವಾಗಲೂ ಗಲಭೆಗಳಿಗೆ ಕಾರಣವೆಂದು ಬಿಂಬಿಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ ಎಂದು Live Law ವರದಿ ಮಾಡಿದೆ.
ಧಾರ್ಮಿಕ ಮೆರವಣಿಗೆಗಳನ್ನು ನಿಯಂತ್ರಿಸಲು ಹಾಗೂ ಅವುಗಳನ್ನು ಆಯೋಜಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಹೊರಡಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.
ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಧಾರ್ಮಿಕ ಹಬ್ಬಗಳು ಗಲಭೆಗಳಿಗೆ ಕಾರಣವಾಗುತ್ತವೆ ಎಂದು ನಾವು ಯಾವಾಗಲೂ ಏಕೆ ಬಿಂಬಿಸಲು ಬಯಸುತ್ತೇವೆ? ಚಂದ್ರಚೂಡ್ ಪ್ರಶ್ನಿಸಿದರು.
'ದೇಶದಲ್ಲಿ ಆಗುವ ಒಳ್ಳೆಯದನ್ನು ನೋಡೋಣ. ಗಣೇಶ ಪೂಜೆಯ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಲಕ್ಷಗಟ್ಟಲೆ ಜನ ಸೇರುತ್ತಾರೆ. ಆದರೆ ಅಲ್ಲಿ ಗಲಭೆಗಳು ನಡೆಯುವುದಿಲ್ಲ'