ಮುಳ್ಳೇರಿಯ: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬೆಳ್ಳೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿ.ಎ ಮಿಥುನ್‍ಕೈಲಾಸ್ ಅವರನ್ನು ವರ್ಗಾಯಿಸಿ ಪಂಚಾಯಿತಿ ಉಪನಿರ್ದೇಶಕರು ಆದೇಶಿಸಿದ್ದಾರೆ. ಇವರನ್ನು ಮಲಪ್ಪುರಂ ಜಿಲ್ಲೆಯ ಮರಕ್ಕರ ಗ್ರಾಮ ಪಂಚಾಯಿತಿಗೆ ವರ್ಗಾಯಿಸಲಾಗಿದೆ.
ಪ್ರಸಕ್ತ ಬೆಳ್ಳೂರು ಗ್ರಾಮ ಪಂಚಾಯಿತಿ ಹೆಡ್‍ಕ್ಲರ್ಕ್‍ಗೆ ಕಾರ್ಯದರ್ಶಿ ಹೊಣೆ ವಹಿಸಲಾಗಿದೆ. ಪಂಚಾಯಿತಿಯ ಆಡಳಿತ ಸಮಿತಿಯೊಂದಿಗೆ ಕಾರ್ಯದರ್ಶಿ ಮಿಥುನ್‍ಕೈಲಾಸ್ ಸಹಕರಿಸುತ್ತಿಲ್ಲ, ಇತರ ಸಿಬ್ಬಂದಿ , ಸಾರ್ವಜನಿಕರೊಂದಿಗೂ ಅನುಚಿತವಾಗಿ ವರ್ತಿಸುತ್ತಿದ್ದಾರೆ ಅಲ್ಲದೆ ಆಡಳಿತಮಂಡಳಿ ಕೈಗೊಳ್ಳುವ ಕೆಲವೊಂದು ತೀರ್ಮಾನ ಜಾರಿಗೂ ವಿಳಂಬ ನಡೆಸುತ್ತಿದ್ದಾರೆ ಎಂಬ ಆರೋಪಗಳಿದ್ದು, ಕಾರ್ಯದರ್ಶಿಯನ್ನು ಬದಲಾಯಿಸುವ ಬಗ್ಗೆ ಆಡಳಿತ ಮಂಡಳಿ ಠರಾವು ಮಂಡಿಸಿತ್ತು.
ಕರ್ತವ್ಯಲೋಪ: ಬೆಳ್ಳೂರು ಗ್ರಾ.ಪಂ ಕಾರ್ಯದರ್ಶಿ ವರ್ಗಾವಣೆ
0
ಡಿಸೆಂಬರ್ 17, 2022