ಮಂಜೇಶ್ವರ: ‘ಗುರುನರಸಿಂಹ ಯಕ್ಷಬಳಗ ಮೀಯಪದವು’ ತಂಡದವರಿಂದ ಇತ್ತೀಚೆಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಧನುರ್ಮಾಸ ವಿಶೇಷ ದಿನಾಚರಣೆ ಅಂಗವಾಗಿ ಸೇವಾರೂಪದಲ್ಲಿ ನಡೆಸಿದ ‘ಭಕ್ತ ಅಂಬರೀಷ’ ತಾಳಮದ್ದಳೆ ಜನಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಗಳಲ್ಲಿ ರಾಮಹೊಳ್ಳ ಸುರತ್ಕಲ್, ಸ್ಕಂದ ಮಯ್ಯ ವರ್ಕಾಡಿ ಹಾಗೂ ಮುಮ್ಮೇಳದಲ್ಲಿ ವೇದಮೂರ್ತಿ ಗಣೇಶ ನಾವಡ ಮೀಯಪದವು, ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ಗುರುರಾಜ ಹೊಳ್ಳ ಬಾಯಾರು, ಅವಿನಾಶ ಹೊಳ್ಳ ವರ್ಕಾಡಿ, ಹರೀಶ ನಾವಡ ಮಜಿಬೈಲು, ಮಮತ ನಾವಡ ಮಜಿಬೈಲು ಭಾಗವಹಿಸಿದ್ದರು.
ತಂಡದ ಕಲಾವಿದರನ್ನು ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಭಿನಂದಿಸಿದರು. ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಧರ್ಮದರ್ಶಿ ಶ್ರೀಧರ ರಾವ್ ಆರ್ ಎಂ ಮೀಯಪದವು ಉಪಸ್ಥಿತರಿದ್ದರು.
ಸಾಲಿಗ್ರಾಮದಲ್ಲಿ ರಂಜಿಸಿದ ಗುರುನರಸಿಂಹ ತಂಡದ ‘ಭಕ್ತ ಅಂಬರೀಷ’ ತಾಳಮದ್ದಳೆ
0
ಡಿಸೆಂಬರ್ 22, 2022