ಪೆರ್ಲ : ಅಂತರಾಷ್ಟ್ರೀಯ ವಿಭಿನ್ನ ಸಾಮಾಥ್ರ್ಯ ದಿನಾಚರಣೆಯ ಅಂಗವಾಗಿ ಎಣ್ಮಕಜೆ ಪಂಚಾಯತ್ ಮಟ್ಟದ ವಿಭಿನ್ನ ಸಾಮಾಥ್ರ್ಯದ ಮಕ್ಕಳ ಆಕರ್ಷಣೀಯ ಮೆರವಣಿಗೆ ಹಾಗೂ ಸಭೆ ಪೆರ್ಲ ಪೇಟೆಯಲ್ಲಿ ಜರಗಿತು.
ಜಿ.ಪಂ. ಹಾಗೂ ಸಾಮೂಹಿಕ ನೀತಿ ಇಲಾಖೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಣ್ಮಕಜೆ ಪಂಚಾಯತಿನ ಸಾಂತ್ವನ ಬಡ್ಸ್ ಶಾಲೆ ಹಾಗೂ ನವಜೀವನ ಸ್ಪೆಶಲ್ ಸ್ಕೂಲಿನ ಮಕ್ಕಳು ಪಾಲ್ಗೊಂಡಿದ್ದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್,ಸೌಧಾಭಿ ಹನೀಫ್,ಪಂ.ಸದಸ್ಯ ಮಹೇಶ್ ಭಟ್, ಮಾಜಿ ಉಪಾಧ್ಯಕ್ಷೆ ಆಯಿμÁ ಎ.ಎ,ನವಜೀವನ ಸ್ಪೆಶಲ್ ಶಾಲಾ ಪ್ರಾಂಶುಪಾಲ ಫಾದರ್ ಜೋಸ್, ಎಚ್.ಸಿ.ಪ್ರೇಮ್ ಚಂದ್ ಮೊದಲಾದವರು ಭಾಗವಹಿಸಿದ್ದರು. ಬಡ್ಸ್ ಶಾಲಾ ಫ್ರಿನ್ಸಿಪಾಲ್ ಮರಿಯಾಂಬಿ ಸ್ವಾಗತಿಸಿ ಸಿಸ್ಟರ್ ಮರೀನಾ ವಂದಿಸಿದರು.