ನವದಹೆಲಿ: ಶೇಕಡ 90 ರಷ್ಟು ಅಪರೂಪದ ಭೂ ಖನಿಜಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಭಾರತದಲ್ಲಿ ಅನ್ವೇಷಣೆಗೆ ಸೂಕ್ತ ಆದ್ಯತೆ ನೀಡಬೇಕು ಹಾಗೂ ದೇಶಕ್ಕೆ ಇಂತಹ ಅವಲಂಬನೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಶುಕ್ರವಾರ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಅಪರೂಪದ ಭೂಮಿಯ ಖನಿಜಗಳ ಅನ್ವೇಷಣೆ ದೇಶದಲ್ಲಿ ಅಸಾಧಾರಣವಾಗಿ ಕಡಿಮೆಯಾಗಿದೆ. ಈ ಖನಿಜಗಳು 17 ಅತ್ಯಂತ ನಿರ್ಣಾಯಕ ಅಂಶಗಳನ್ನು ಒಳಗೊಂಡಿದ್ದು, ಅವುಗಳನ್ನು ಪರಮಾಣು ಶಕ್ತಿ ಮತ್ತು ಅಯಸ್ಕಾಂತಗಳಿಂದ ಹಿಡಿದು ವಿದ್ಯುತ್ ಚಾಲಿತ ವಾಹನಗಳವರೆಗೆ ಬಳಸಲಾಗುತ್ತದೆ ಎಂದು ಹೇಳಿದರು.
ಭೂಮಿಯ ವಸ್ತುಗಳಿಗಾಗಿ ಪ್ರತಿಕೂಲ ರಾಷ್ಟ್ರದ ಮೇಲಿನ ಅವಲಂಬನೆ ದೇಶಕ್ಕೆ ಒಳ್ಳೆಯದಲ್ಲ ಎಂದು ನಾನು ಭಾವಿಸುತ್ತೇನೆ. ವಿಶ್ವದ ಅಪರೂಪದ ಭೂಮಿಯ ಖನಿಜ ನಿಕ್ಷೇಪಗಳಲ್ಲಿ ಭಾರತ ಶೇಕಡ 6 ರಷ್ಟನ್ನು ಹೊಂದಿದೆ ಎಂದರು.
ಸ್ಥಳೀಯ ಅನ್ವೇಷಣೆಗೆ ಸೂಕ್ತ ಆದ್ಯತೆ ನೀಡಬೇಕು ಮತ್ತು ಅಪರೂಪದ ಭೂಮಿಯ ಖನಿಜಗಳನ್ನು ನಿರ್ಲಕ್ಷಿಸಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು.