ಕೊಚ್ಚಿ: ಹರತಾಳ ನೆಪದಲ್ಲಿ ಪಾಪ್ಯುಲರ್ ಫ್ರಂಟ್ ನಾಯಕರು ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುತ್ತಿರುವ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವುದನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ. ಸಾರ್ವಜನಿಕ ಆಸ್ತಿಗಳ ನಾಶಕ್ಕೆ ಸಂಬಂಧಿಸಿದ ಕಂದಾಯ ವಸೂಲಾತಿ ವಿಳಂಬಕ್ಕೆ ಟೀಕೆ ವ್ಯಕ್ತಪಡಿಸಿದೆ.
ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆರು ತಿಂಗಳು ಬೇಕು ಎಂದು ಸರ್ಕಾರ ಘೋಷಿಸಿತ್ತು. ಈ ಬಗ್ಗೆ ಹೈಕೋರ್ಟ್‍ನ ಈ ಪ್ರತಿಕ್ರಿಯೆ ನೀಡಿದೆ. ಇದು ಸಾಮಾನ್ಯ ಪ್ರಕರಣವಲ್ಲ. ಆಸ್ತಿ ಮುಟ್ಟುಗೋಲು ಸೇರಿದಂತೆ ಎಲ್ಲ ಕ್ರಮಗಳನ್ನು ಜನವರಿಯೊಳಗೆ ಪೂರ್ಣಗೊಳಿಸಬೇಕು ಎಮದು ನ್ಯಾಯಾಲಯ ನಿರ್ದೇಶಿಸಿದೆ.
ಸಾರ್ವಜನಿಕ ಆಸ್ತಿ ನಾಶವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಶುಕ್ರವಾರ ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ. ಅಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಗೃಹ ಕಾರ್ಯದರ್ಶಿಗೆ ನ್ಯಾಯಮೂರ್ತಿ ಜಯಶಂಕರ್ ನಂಬಿಯಾರ್ ಅವರ ವಿಭಾಗೀಯ ಪೀಠ ಸೂಚಿಸಿದೆ.
ಪಾಪ್ಯುಲರ್ ಫ್ರಂಟ್‍ನ ಮನೆ ಮತ್ತು ಕಚೇರಿಗಳಲ್ಲಿ ಎನ್‍ಐಎ ನಡೆಸಿದ ದಾಳಿಯನ್ನು ವಿರೋಧಿಸಿ ಸೆಪ್ಟೆಂಬರ್ 23 ರಂದು ರಾಜ್ಯಾದ್ಯಂತ ಹರತಾಳ ನಡೆಸಲಾಯಿತು. ಹಲವು ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು. ದಾಳಿಕೋರರು ನೂರಾರು ಬಸ್ಸುಗಳನ್ನು ಧ್ವಂಸಗೊಳಿಸಿದ್ದರು. ಇದರ ವಿರುದ್ಧ ಹೈಕೋರ್ಟ್ ಈಗಾಗಲೇ ಪ್ರತಿಕ್ರಿಯಿಸಿದ್ದು, ಆಸ್ತಿ ಮುಟ್ಟುಗೋಲು ವಿವರ ತಿಳಿಸುವಂತೆ ಸೂಚಿಸಿತ್ತು.
ಸಾರ್ವಜನಿಕ ಆಸ್ತಿ ನಾಶ; ಪಿಎಫ್‍ಐ ವಿರುದ್ಧದ ಆಸ್ತಿ ಮುಟ್ಟುಗೋಲು ಜನವರಿಯೊಳಗೆ ಪೂರ್ಣಗೊಳಿಸಬೇಕು: ವಿಳಂಬವನ್ನು ಟೀಕಿಸಿದ ಹೈಕೋರ್ಟ್
0
ಡಿಸೆಂಬರ್ 19, 2022
Tags