ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ರೂಪೀಕರಣ ಸಭೆ ಕ್ಷೇತ್ರದ ಸಭಾಂಗಣದಲ್ಲಿ ಜರಗಿತು.
ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ನ್ಯಾಯವಾದಿ. ಐ ವಿ ಭಟ್, ನ್ಯಾಯವಾದಿ. ಐ ಸುಬ್ಬಯ್ಯ ರೈ, ಅಧ್ಯಕ್ಷರಾಗಿ ವಸಂತ ಪೈ ಬದಿಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಜಗನ್ನಾಥ ರೈ ಪೆರಡಾಲ ಗುತ್ತು, ಕೋಶಾಧಿಕಾರಿಯಾಗಿ ಸೂರ್ಯನಾರಾಯಣ ಭಟ್ ಶಾಂತಿಪಳ್ಳರವರನ್ನು ಆಯ್ಕೆ ಮಾಡಲಾಯಿತು. 101 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಸಮಿತಿ ರೂಪೀಕರಣ ಸಭೆಯ ಅಧ್ಯಕ್ಷತೆ ಚಂಬಲ್ತಿಮಾರ್ ವೆಂಕಟರಮಣ ಭಟ್ ವಹಿಸಿದರು. ಧಾರ್ಮಿಕ ಮುಂದಾಳು ವಸಂತ ಪೈ ಮಾತನಾಡಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಗ್ರಾಮದ ಪ್ರತಿಯೊಬ್ಬನು ಶ್ರಮ ಮತ್ತು ತನ್ನಿಂದಾಗುವ ಆರ್ಥಿಕ ಸಂಪತ್ತನ್ನು ಕ್ಷೇತ್ರದ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಕೊಡಬೇಕಾಗಿ ತಿಳಿಸಿದರು. ಉದನೇಶ್ವರ ದೇವರ ಜೀರ್ಣೋದ್ಧಾರದಿಂದ ಭೂಮಿಯಲ್ಲಿರುವ ಪ್ರತಿಯೋರ್ವ ಜೀವರಾಶಿಗಳಿಗೂ ಶ್ರೇಯಸ್ಸು ಲಭಿಸಲಿದೆ ಎಂದರು.
ವೇದಿಕೆಯಲ್ಲಿ ಕೊಡ್ಯಮ್ಮೆ ಅರಮನೆಯ ಕೃಷ್ಣಯ್ಯ ಬಲ್ಲಾಳ, ಜಯದೇವ ಖಂಡಿಗೆ, ಎಸ್.ಎನ್. ಮಯ್ಯ ಬದಿಯಡ್ಕ, ವಾಸುದೇವ ಕೊಳತ್ತಾಯ, ಕ್ಷೇತ್ರದ ಟ್ರಸ್ಟಿಗಳಾದ ಪಿ.ಜಿ. ಜಗನ್ನಾಥ ರೈ, ಕೃಷ್ಣ ಪೆರಡಾಲ, ಜಗದೀಶ ಪೆರಡಾಲ, ಪಿ.ಜಿ. ಚಂದ್ರಹಾಸ ರೈ, ಗ್ರಾ.ಪಂ. ಸದಸ್ಯ ರವಿಕುಮಾರ್ ರೈ , ಶ್ಯಾಮ್ ಪ್ರಸಾದ್ ಮಾನ್ಯ, ಡಾ. ಶ್ರೀನಿಧಿ ಸರಳಾಯ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಧಾರ್ಮಿಕ ರಂಗದ ಪ್ರಮುಖರು, ವಿವಿಧ ಕ್ಲಬ್ ಪದಾಧಿಕಾರಿಗಳು, ಮಾತೆಯರು ಉಪಸ್ಥಿತರಿದ್ದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಶುಭ ಆಶೀರ್ವಾದದೊಂದಿಗೆ, ಶ್ರೀ ಕ್ಷೇತ್ರದ ತಂತ್ರಿವರ್ಯ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ದೈವಜ್ಞ ವಳಕ್ಕುಂಜ ವೆಂಕಟ್ರಮಣ ಭಟ್ ರವರ ಪ್ರಶ್ನೆ ಚಿಂತನೆಯ ಪ್ರಕಾರ ಜೀರ್ಣೋದ್ಧಾರ ಕಾರ್ಯಗಳು ನಡೆಸಲು ತೀರ್ಮಾನಿಸಲಾಯಿತು. ಪ್ರತಿ ತಿಂಗಳ ಎರಡನೇ ಭಾನುವಾರ ಬೆಳ್ಳಗೆ 9:ಕ್ಕೆ ಜೀರ್ಣೋದ್ಧಾರ ಸಮಿತಿ ಸಭೆಯನ್ನು ಕ್ಷೇತ್ರದಲ್ಲಿ ಕರೆಯಲು ತೀರ್ಮಾನಿಸಲಾಯಿತು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಉದಯ ಭಟ್ ಪಟ್ಟಾಜೆ ಪ್ರಾರ್ಥನೆ ಹಾಡಿದರು. ನೂತನ ಕೋಶಾಧಿಕಾರಿ ಸೂರ್ಯನಾರಾಯಣ ಭಟ್ ತಲ್ಪನಾಜೆ ವಂದಿಸಿದರು.
ಪೆರಡಾಲ ಕ್ಷೇತ್ರ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ
0
ಡಿಸೆಂಬರ್ 31, 2022
Tags