ವಾಷಿಂಗ್ ಟನ್: ಅಣ್ವಸ್ತ್ರ ಶಸ್ತ್ರಾಸ್ತ್ರ ಬಳಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನ ರಷ್ಯಾ ಮೇಲೆ ಪ್ರಭಾವ ಬೀರಿದ್ದು, ಉಕ್ರೇನ್ ಯುದ್ಧದ ವಿಷಯದಲ್ಲಿ ಜಾಗತಿಕ ಮಟ್ಟಜಾಗತಿಕ ದುರಂತವೊಂದನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ಸಿಐಎ ಮುಖ್ಯಸ್ಥ ಬಿಲ್ ಬರ್ನ್ಸ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಅಣ್ವಸ್ತ್ರ ಬಳಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅದೂ ಸಹ ರಷ್ಯನ್ನರ ಮೇಲೆ ಪ್ರಭಾವ ಬೀರಿದೆ ಎಂದು ಪಿಬಿಎಸ್ ಗೆ ನೀಡಿದ ಸಂದರ್ಶನದಲ್ಲಿ ಬುಲ್ ಬರ್ನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಅಣ್ವಸ್ತ್ರಗಳ ವಿಷಯ ಬೆದರಿಸುವ ಉದ್ದೇಶವಾಗಿದೆ, ಯುದ್ಧತಂತ್ರದಲ್ಲಿ ಅಣ್ವಸ್ತ್ರಗಳ ಬಳಕೆ ಯೋಜನೆಗೆ ಸ್ಪಷ್ಟ ಸಾಕ್ಷ್ಯಗಳು ಕಾಣುತ್ತಿಲ್ಲ ಎಂದು ಸಿಐಎ ಮುಖ್ಯಸ್ಥ ಬಿಲ್ ಬರ್ನ್ಸ್ ಹೇಳಿದ್ದಾರೆ.
ಡಿ.03 ರಂದು ಮಾತನಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಯುದ್ಧ ಇನ್ನಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಿದ ಬೆನ್ನಲ್ಲೇ ಸಿಐಎ ಮುಖ್ಯಸ್ಥ ಬಿಲ್ ಬರ್ನ್ಸ್ ಈ ಹೇಳಿಕೆ ನೀಡಿದ್ದಾರೆ. ಅಣು ಯುದ್ಧದ ಬೆದರಿಕೆ ಇನ್ನೂ ಹೆಚ್ಚಾಗಲಿದೆ ಎಂದೂ ಬಿಲ್ ಬರ್ನ್ಸ್ ಎಚ್ಚರಿಸಿದ್ದಾರೆ.
ರಷ್ಯಾದ ಮಾನವ ಹಕ್ಕುಗಳ ಪರಿಷತ್ ನಲ್ಲಿ ಪುಟಿನ್, ರಷ್ಯಾ ತನ್ನ "ಲಭ್ಯವಿರುವ ಎಲ್ಲಾ ವಿಧಾನಗಳಿಂದ" ಹೋರಾಡುತ್ತದೆ ಎಂದು ಹೇಳಿದ್ದರು.