ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲದ ನಾರಂಪಾಡಿ 119, 120 ಬೂತ್ ಸಮಿತಿಯ ನೇತೃತ್ವದಲ್ಲಿ ಡಿಸೆಂಬರ್ 1 ವೀರ ಬಲಿದಾನಿ ಕೆ ಟಿ ಜಯಕೃಷ್ಣ ಮಾಸ್ತರ್ ಬಲಿದಾನ ದಿನದಂಗವಾಗಿ ಪುಷ್ಪಾರ್ಚನೆ ನಡೆಯಿತು.
ನಾರಂಪಾಡಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಪಿ ಆರ್, ಗೋಪಾಲಕೃಷ್ಣ ಎಂ, ಬೂತ್ ಸಮಿತಿ ಅಧ್ಯಕ್ಷರುಗಳಾದ ಸೀತಾರಾಮ ರಾವ್, ಸತ್ಯಗೋಪಾಲ, ಪದಾಧಿಕಾರಿಗಳಾದ ಸತೀಶ ಪಿ, ಉದಯ ಪಿ, ರಾಧಾಕೃಷ್ಣ ರೈ ಮುಂಡಾಸು, ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.
ಜಯಕೃಷ್ಣ ಮಾಸ್ತರ್ ಬಲಿದಾನ ದಿನಾಚರಣೆ
0
ಡಿಸೆಂಬರ್ 02, 2022