ಕಾಸರಗೋಡು: ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ 90 ನೇ ವಾರ್ಷಿಕ ಸಂಭ್ರ್ರಮ ಮತ್ತು ಮಹಿಳಾ ಸಮಾವೇಶದಂಗವಾಗಿ ಬೀರಂತಬೈಲ್‍ನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಸಮಾಜ ಭವನದಲ್ಲಿ ಸ್ವಸಮಾಜದ ಬಂಧುಗಳಿಗೆ ಭಜನೆ, ಕೋಲಾಟ ಮತ್ತು ರಸ ಪ್ರಶ್ನೆ ಸ್ಪರ್ಧೆ ನಡೆಯಿತು.
ಕಾರ್ಯಕ್ರಮವನ್ನು ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಕಾರ್ಯದರ್ಶಿ ಪ್ರದೀಪ್ ಬೇಕಲ್, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ಮಹಿಳಾ ಸಂಘದ ಗೌರವ ಅಧ್ಯಕ್ಷೆ ಆಶಾ ರಾಧಾಕೃಷ್ಣ, ಅಧ್ಯಕ್ಷೆ ಉಷಾ ಕಿರಣ್, ಕಾರ್ಯದರ್ಶಿ ಸುಕನ್ಯಾ ಹರೀಶ್, ಉಷಾ ಟೀಚರ್ ಪಾರೆಕಡವು, ಸಂಧ್ಯಾರಾಣಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ಭಜನೆ, ಕೋಲಾಟ ಮತ್ತು ರಸ ಪ್ರಶ್ನೆ ಸ್ಪರ್ಧೆ
0
ಡಿಸೆಂಬರ್ 09, 2022
Tags