ಆಂಧ್ರ ಪ್ರದೇಶ: ದೇವಸ್ಥಾನದ ಅರ್ಚಕರೊಬ್ಬರಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ, ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ದೇವಸ್ಥಾನದ ಅರ್ಚಕರು ವಿಡಿಯೋವೊಂದನ್ನು ಮಾಡಿ, ತಮ್ಮ ಅಳಲು ತೋಡಿಕೊಂಡಿದ್ದಾರೆ. ನಮ್ಮ ಗ್ರಾಮದಲ್ಲಿ ಕಿಶ್ಚಿಯನ್ ಸಮುದಾಯಕ್ಕೆ ಸೇರಿದ ಅನೇಕ ಕುಟುಂಬಗಳಿವೆ.
ಇದೀಗ ಇಲ್ಲಿನ ಗ್ರಾಮಸ್ಥರು ನನಗೆ ಹಿಂದೂ ದೇವಾಲಯವನ್ನು ತೊರೆದು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಒಪ್ಪದ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಜೈ ಶ್ರೀ ರಾಮ್… ನನ್ನ ಹೆಸರು ಅದ್ದೆಪಲ್ಲಿ ರಾಘವುಲು. ಬಾಪಟ್ಲ ಜಿಲ್ಲೆಯ ನಿವಾಸಿಯಾದ ನಾನು, ತಿರುಪತಿ ತಿರುಮಲ ದೇವಸ್ಥಾನದ ಸಹಾಯದೊಂದಿಗೆ ಮಾದಿಗೆಪಲ್ಲೆಯಲ್ಲಿ ಕೋದಂಡ ರಾಮ ಮಂದಿರವನ್ನು ಸ್ಥಾಪಿಸಿದ್ದೆವು. ಇದೀಗ ಇಲ್ಲಿರುವ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜನರು, ಹಿಂದೂ ದೇವತೆಗಳನ್ನು ನಂಬಬೇಡಿ ಎಂದು ಹೇಳಿಕೊಂಡು, ನನ್ನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಆರಂಭದಿಂದಲೂ ನಾನು ಮತಾಂತರವನ್ನು ವಿರೋಧಿಸುತ್ತಾ ಬಂದಿದ್ದೇನೆ. ಹೀಗಾಗಿ ನಾನು ಕ್ರೈಸ್ತ ಸಮುದಾಯದ ಮಹಿಳೆಯರನ್ನು ಕೆಟ್ಟದಾಗಿ ನಿಂದಿಸುತ್ತಿದ್ದೇನೆ ಎಂದು ದೂರು ನೀಡಿದ್ದಾರೆ. ಇದೀಗ ನಗರ ಮಂಡಲ ಠಾಣಾಧಿಕಾರಿ ನನ್ನ ಹೆಸರಿನಲ್ಲಿ ರೌಡಿ ಶೀಟ್ ತೆರೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅರ್ಚಕ ಅದ್ದೆಪಲ್ಲಿ ರಾಘವುಲು ಅಳಲು ತೋಡಿಕೊಂಡಿದ್ದಾರೆ.
ಸಜ್ಜವಾರಿಪಾಲೆಂನಲ್ಲಿರುವ ದೇವಸ್ಥಾನವನ್ನು ಕೋದಂಡ ರಾಮ ದೇವಸ್ಥಾನವನ್ನು ಇಲ್ಲಿನ ಗ್ರಾಮಸ್ಥರ ಯಾವ ಸಂದರ್ಭದಲ್ಲಿ ಕೆಡವಿ ಹಾಕುತ್ತಾರೋ ಗೊತ್ತಿಲ್ಲ. ಹೀಗಾಗಿ ಸಮಸ್ತ ಹಿಂದೂಗಳಲ್ಲಿ ಒಂದು ವಿನಂತಿ, ಆದಷ್ಟು ಬೇಗ ಮತಾಂತರ ಸಮಸ್ಯೆಯಿಂದ ಪಾರು ಮಾಡಿ ಎಂದು ಅರ್ಚಕ ಅದ್ದೆಪಲ್ಲಿ ರಾಘವುಲು ಕೇಳಿಕೊಂಡಿದ್ದಾರೆ.