ಮಂಜೇಶ್ವರ: ತುಳುನಾಡಿನ ಸಾಮಾಜಿಕ, ಸಾಂಸ್ಕøತಿಕ ಪರಂಪರೆಯ ದ್ಯೋತಕವಾದ ಕಂಬಳ ಆರಾಧನಾ ಕ್ರೀಡೆಯಾಗಿ ಜನರನ್ನು ಬೆಸೆದು ಬೆಳೆಸಿದ ಇತಿಹಾಸ ಹೊಂದಿದೆ. ಇಲ್ಲಿಯ ಕೃಷಿ ಸಂಬಂಧಿ ಜನಜೀವನದೊಂದಿಗೆ ಬೆಸೆದಿರುವ ಕಂಬಳವನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಕಾಸರಗೋಡಿನಲ್ಲಿ ಪ್ರಯತ್ನಗಳಾಗಬೇಕು ಎಂದು ಅರಿಬೈಲು ಶ್ರೀನಾಗಬ್ರಹ್ಮ ಸನ್ನಿಧಿಯ ತಂತ್ರಿ ಸಂದೀಪ್ ಅರಿನಾಯ ಅವರು ತಿಳಿಸಿದರು.
ಅರಿಬೈಲು ಶ್ರೀ ನಾಗಬ್ರಹ್ಮ ದೇವರ ಕಂಬಳಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪುರಾತನ ಕಾಲದಿಂದಲೂ ನಡೆದು ಬರುತ್ತಿರುವ ಅರಿಬೈಲು ಕಂಬಳ ಹೆಮ್ಮೆ ಮತ್ತು ಇದರ ಹಿಂದಿರುವ ಧಾರ್ಮಿಕ ಪ್ರಜ್ಞೆ ಸರ್ವರನ್ನೂ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ರಾಹುಲ್ ಆರಿನಾಯ ಅವರು ಉಪಸ್ಥಿತರಿದ್ದರು. ಕಂಬಳದ ಹಗ್ಗದ ವಿಭಾಗದಲ್ಲಿ ಪಾವೂರು ನೆಕ್ಕಳ ವಿಜಯ ಮೋನಪ್ಪ ಪೂಜಾರಿ(ಪ್ರಥಮ), ನೇಗಿಲು ವಿಭಾಗದಲ್ಲಿ ಮುಳ್ಳೆರಿಯ ಕಾರ್ಲೆ ಕಟ್ಟದಮನೆ ಬಾಲಕೃಷ್ಣ ಶೆಟ್ಟಿ(ಪ್ರಥಮ)ಬಹುಮಾನ ಗಳಿಸಿದರು.
ಹಗ್ಗದ ವಿಭಾಗದಲ್ಲಿ ಕಾಂತಪ್ಪ ಪೂಜಾರಿ ಕಲ್ಲಗದ್ದೆ ಬುಡ್ರಿಯ, ಉಮೇಶ ಶೆಟ್ಟಿ ಆಸನ ಬೈಲು, ಕೊಡ್ಲಮೊಗೆರು ಪಾಲೆಂಗ್ರಿ ಮೋಹಿದಿನ್ ಕುಂಞÂ, ಪಾವೂರು ನೆಕ್ಕಳ ಇಬ್ರಾಹಿಂ ಮೊಹಮ್ಮದ್ ಹನೀಫ್, ಹರಿಫ್ ಸೋಂಕಾಲ್, ಮಾಣಿಬೆಟ್ಟು ವಸಂತ ಶೆಟ್ಟಿ, ಪತ್ವಾಡಿ ಹೊಸಮನೆ ಮುಸ್ತಫಾ, ಪಂಜಿಗೇರ್ ಕರಂಬಾರ್ ಬೆಟ್ಟು ಆನಂದ, ಪಾವೂರು ಮೋನು ಬ್ಯಾರಿ, ಕೌಡೂರು ಬೀಡು ಮಾರಪ್ಪ ಭಂಡಾರಿ ಭಾಗವಹಿಸಿದ್ದವು.
ನೇಗಿಲು ವಿಭಾಗದಲ್ಲಿ ಪದ್ಮಿನಿ ಪ್ರಜಿತ್ ಮುಳ್ಳೇರಿಯ ಕಾರ್ಳೆ, ಕಡಂಬಾರು ಕೆಳಗಿನ ಮನೆ ಸಂಜೀವ ಯಾದವ ಮಡಿವಾಳ, ತಲಪಾಡಿ ಪಂಜಳ ಕೀರ್ತನ್ ರವೀಂದ್ರ ಪಕಳ, ಬಡಾಜೆ ಪಾಪಿಲ ಇಸುಬ್ ಬ್ಯಾರಿ ತಂಡಗಳು ಭಾಗವಹಿಸಿದ್ದವು.
ಕಂಬಳವನ್ನು ಅರಿಬೈಲು ನೆತ್ಯ ಗೋಪಾಲ ಶೆಟ್ಟಿ ಅವರು ನಿರ್ವಹಿಸಿದರು. ತೀರ್ಪುಗಾರರಾಗಿ ಅರಿಬೈಲು ಕಟ್ಟೆ ಪಕೀರ ಮೂಲ್ಯ, ಕಟ್ಟೆ ರಮೇಶ್ ಮೂಲ್ಯ ಭಾಗವಹಿಸಿದ್ದರು. ಕಂಬಳಕ್ಕೆ ಪೂಕರೆ ಸ್ಥಾಪನೆಗೈದು ದೇವರ ಉತ್ಸವ ನಡೆದು ಸಂಪನ್ನಗೊಂಡಿತು.