HEALTH TIPS

ಜೂಜಾಟದ ಜಾಹೀರಾತುಗಳನ್ನು ಪ್ರದರ್ಶಿಸದಂತೆ ಗೂಗಲ್ ಗೆ ಸೂಚಿಸಿದ ಕೇಂದ್ರ: ವರದಿ

 

              ಬೆಂಗಳೂರು: ವಿದೇಶಿ ಮೂಲದ ಕಂಪನಿಗಳ ಜೂಜಾಟದ ಜಾಹೀರಾತುಗಳನ್ನು ಮರೆ ಮಾಚಿ ಪ್ರದರ್ಶಿಸದಂತೆ ಭಾರತವು ಗೂಗಲ್ ಗೆ (Google) ಸೂಚಿಸಿದೆ ಎಂದು ಈ ಬೆಳಗಣಿಗೆ ಕುರಿತು ಮಾಹಿತಿ ಹೊಂದಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಮೂಲವೊಂದನ್ನು ಉಲ್ಲೇಖಿಸಿ mint ವರದಿ ಮಾಡಿದೆ.

               Fairplay, PariMatch, Betwayಯಂತಹ ಜೂಜಾಟದ ವೇದಿಕೆಗಳ ಜಾಹೀರಾತನ್ನು ಪ್ರತ್ಯಕ್ಷವಾಗಿ ಅಥವಾ ಮರೆಮಾಚಿ ತನ್ನ ಹುಡುಕಾಟದ ಫಲಿತಾಂಶದಲ್ಲಿ ಪ್ರದರ್ಶಿಸುವುದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆಲ್ಫಬೆಟ್ ಇಂಕ್ ಮಾಲಕತ್ವದ ಗೂಗಲ್ ಇಂಡಿಯಾಗೆ ಕಳೆದ ಪತ್ರ ರವಾನಿಸಲಾಗಿದೆ ಎಂದು ವರದಿಯಾಗಿದೆ.

                   ಕೌಶಲ ಆಟಗಳನ್ನು ಹೊರತುಪಡಿಸಿ ಉಳಿದೆಲ್ಲ ಅದೃಷ್ಟದ ಆಟಗಳನ್ನು ನಿಯಂತ್ರಣದಿಂದ ಹೊರಗಿಡಬೇಕು ಎಂಬ ಪ್ರಸ್ತಾವನೆಯನ್ನು ಪ್ರಧಾನ ಮಂತ್ರಿಯ ಕಾರ್ಯಾಲಯವು ತಿರಸ್ಕರಿಸಿದ್ದು, ಭಾರತವು ಹಣವನ್ನು ಒಳಗೊಂಡಿರುವ ಎಲ್ಲ ಬಗೆಯ ಆನ್ ಲೈನ್ ಜೂಜಾಟಗಳನ್ನು ನಿಯಂತ್ರಿಸುವ ಯೋಜನೆ ಹೊಂದಿದೆ ಎಂದು ಇದಕ್ಕೂ ಮುನ್ನ ಡಿ. 4ರಂದು ಸರ್ಕಾರಿ ದಾಖಲೆ ಮತ್ತು ಮೂರು ಸುದ್ದಿ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

                'ಅಕ್ಟೋಬರ್ 3ರಂದು ನೀಡಲಾದ ಸೂಚನೆಯ ಮೇರೆಗೆ ಟಿವಿ ವಾಹಿನಿಗಳು ಮತ್ತು ಒಟಿಟಿ ವೇದಿಕೆಗಳು ಮರೆ ಮಾಚಿದ ಆನ್ ಲೈನ್ ಜೂಜಾಟದ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸ್ಥಗಿತಗೊಳಿಸಿವೆ. ಆದರೆ, ಇಂತಹ ಅನೇಕ ಜಾಹೀರಾತುಗಳು ಯೂಟ್ಯೂಬ್ ಹಾಗೂ ಗೂಗಲ್ ನಲ್ಲಿ ಪ್ರದರ್ಶನಗೊಳ್ಳುತ್ತಿವೆ ಎಂಬ ಸಂಗತಿ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಅಂತಹ ಜಾಹೀರಾತುಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಗೂಗಲ್ ಗೆ ಸೂಚಿಸಲಾಗಿದೆ' ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು mint ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

                ಭಾರತವು ಆನ್ ಲೈನ್ ಕ್ರೀಡೆಗಳನ್ನು ಕೌಶಲ ಅಥವಾ ಅದೃಷ್ಟದ ಆಧಾರದಲ್ಲಿ ವಿಂಗಡಿಸಲು ನಿಯಂತ್ರಣ ಸಂಸ್ಥೆಯೊಂದನ್ನು ಸ್ಥಾಪಿಸಬೇಕಾದ ಅಗತ್ಯವಿದ್ದು, ನಿಷೇಧಿತ ಮಾದರಿಯ ಕ್ರೀಡೆಗಳನ್ನು ತಡೆಯಲು ಹಾಗೂ ಜೂಜಾಟದ ಅಂತರ್ಜಾಲ ತಾಣಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ನಿಯಮಾವಳಿಗಳನ್ನು ರೂಪಿಸಬೇಕಿದೆ ಎಂದು ಸರ್ಕಾರಿ ಸಮಿತಿಯೊಂದು ತನ್ನ ಕರಡು ವರದಿಯಲ್ಲಿ ಅಭಿಪ್ರಾಯ ಪಟ್ಟಿದೆ ಎಂದು ಸೆಪ್ಟೆಂಬರ್ ತಿಂಗಳ ಆರಂಭದಲ್ಲೇ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries