HEALTH TIPS

ಕಾವುಗೋಳಿಯಲ್ಲಿ ರೈಲ್ವೆ ಅಂಡರ್ ಪ್ಯಾಸೇಜ್-ಅಧಿಕಾರಿಗಳಿಂದ ಸ್ಥಳಪರಿಶೀಲನೆ


            ಕಾಸರಗೋಡು: ಚೌಕಿ ಕಾವುಗೋಳಿಯಲ್ಲಿ ರೈಲ್ವೆ ಅಂಡರ್ ಪ್ಯಾಸೇಜ್ ನಿರ್ಮಾಣದ ಬಗ್ಗೆ ಸ್ಥಳಪರಿಶೀಲನೆಗೆ ರೈಲ್ವೆ ಪಿಎಸ್‍ಸಿ ಬೋರ್ಡ್ ಸದಸ್ಯ ಮಟ್ಟನ್ನೂರ್ ರಾಧಾಕೃಷ್ಣನ್ ನೇತೃತ್ವದ ತಂಡ ಸಂದರ್ಶನ ನಡೆಸಿದೆ. ಸ್ಥಳ ಸಂದರ್ಶನದ ನಂತರ ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಲಾಯಿತು.
        ಈ ಪ್ರದೇಶದಲ್ಲಿ ಅಂಡರ್‍ಪಾಸ್ ಇಲ್ಲದಿರುವುದರಿಂದ ಕಾವುಗೋಳಿ ಆಸುಪಾಸಿನ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದಕ್ಷಿಣ ರೈಲ್ವೆ ಅಧಿಕಾರಿಗಳ ತಂಡ ಕಾಸರಗೋಡು ರಐಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಂದರ್ಭ ಬಿಜೆಪಿ ಸಮಿತಿ ವತಿಯಿಂದ ಮನವಿ ಸಲ್ಲಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಪಿಎಸ್‍ಸಿ ಬೋರ್ಡ್ ಸದಸ್ಯರ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಈ ಸಂದರ್ಭ ಮುಖಮಡರಾದ ಸುಕುಮಾರ್ ಕುದ್ರೆಪ್ಪಾಡಿ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಂಪತ್, ಜಿಲ್ಲಾ ಸಮಿತಿ ಸದಸ್ಯ ಉಮೇಶ್ ಕಡಪ್ಪುರ, ಮೊಗ್ರಾಲ್ ಪುತ್ತೂರು ಸಮಿತಿ ಅಧ್ಯಕ್ಷ ಚಂದ್ರಶೇಖರ, ಗಣೇಶ್ ನಾಯ್ಕ್, ಮಲ್ಲಿಕಾ, ಯೋಗೀಶ್ ಉಪಸ್ಥಿತರಿದ್ದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries