ಕಾಸರಗೋಡು: ಪಾಲಕ್ಕಾಡು ಜಿಲ್ಲೆಯ ಪರವೂರು ಶ್ರೀ ವೈದ್ಯನಾಥ ಮಹಾದೇವ ಕ್ಷೇತ್ರದಲ್ಲಿ ಭಾನುವಾರ ಜರಗಿದ ಶತರುದ್ರಾಭಿಷೇಕ ಹಾಗೂ ಮುಗುಳಿ ಸಮರ್ಪಣೆ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯವಹಿಸಿ ಶ್ರೀದೇವರಿಗೆ ಕ್ಷೀರಾಭಿಷೇಕ ಮಾಡಿದರು.
ಬೆಳಗ್ಗೆ ವೈದಿಕ ವೃಂದದ ನೇತೃತ್ವದಲ್ಲಿ ರುದ್ರಪಾರಾಯಣ, ಶತರುದ್ರಾಭಿಷೇಕ, ಪಂಚಲೋಹದ ನಂದಿ ವಿಗ್ರಹ ಸಮರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ಶನಿವಾರ ಸಂಜೆ ಶ್ರೀ ಎರಟ್ಟಪ್ಪನ್ ದೇವಸ್ಥಾನದಿಂದ ಕ್ಷೇತ್ರ ತಂತ್ರಿಗಳು ಪೂರ್ಣಕುಂಭ ಸ್ವಾಗತ ನೀಡಿ ಶ್ರೀಗಳನ್ನು ಕ್ಷೇತ್ರಕ್ಕೆ ಬರಮಾಡಿಕೊಂಡಿದ್ದರು.