ನವದೆಹಲಿ: ಪಂಜಾಬ್ ವಿಭಾಗದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುರುವಾರ ಬೆಳಿಗ್ಗೆ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಗೆ ನುಗ್ಗಿದ್ದು, ಅವರನ್ನು ಪಾಕಿಸ್ತಾನದ ಪಡೆಯು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ ಎಂದು ಬಿಎಸ್‌ಎಫ್ ವಕ್ತಾರ ತಿಳಿಸಿದ್ದಾರೆ.
ಸಿಬ್ಬಂದಿ ಅಬೋಹರ್ ವಿಭಾಗದ ಬಿಎಸ್‌ಎಫ್ ಜಿಜಿ ಬೇಸ್‌ನಲ್ಲಿರುವ ಇಂಡಿಯಾ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ (ಐಬಿ)ರೇಖೆಯ ಬಳಿ ತಪಾಸಣೆ ನಡೆಸಿದ್ದರು. ಬೆಳಿಗ್ಗೆ 6.30ಕ್ಕೆ ಮಂಜು ಹೆಚ್ಚಾಗಿದ್ದುದರಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ರೇಖೆಯನ್ನು ದಾಟಿದ್ದಾರೆ.
ಮಧ್ಯಾಹ್ನ ಪಾಕಿಸ್ತಾನ ರೇಂಜರ್ಸ್ ಅವರೊಂದಿಗೆ ನಡೆದ ಧ್ವಜ ಸಭೆಯಲ್ಲಿ ಬಿಎಸ್‌ಎಫ್ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.