HEALTH TIPS

ವಿರೋಧ ಪಕ್ಷಗಳಿಂದ ರಾಜ್ಯಸಭೆ ಕಲಾಪ ಬಹಿಷ್ಕಾರ

 

               ನವದೆಹಲಿ : ಭಾರತ ಮತ್ತು ಚೀನಾ ಸೇನಾ ಸಂಘರ್ಷದ ಕುರಿತ ಚರ್ಚೆಗೆ ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳು ಬಿಗಿ ಪಟ್ಟು ಹಿಡಿದಿದ್ದರಿಂದ ರಾಜ್ಯಸಭೆಯಲ್ಲಿ ಗುರುವಾರ ಕೋಲಾಹಲ ಸೃಷ್ಟಿಯಾಯಿತು. ಸಭಾಪತಿ ಜಗದೀಪ್‌ ಧನಕರ್‌ ಅವರು ತಮ್ಮ ಬೇಡಿಕೆ ತಿರಸ್ಕರಿಸಿದ್ದರಿಂದ ಕೆರಳಿದ ಸದಸ್ಯರು ಕಲಾಪ‍ ಬಹಿಷ್ಕರಿಸಿದರು.

          ಆರ್‌ಜೆಡಿ ಸಂಸದ ಮನೋಜ್‌ ಝಾ ಅವರು ಸದನದಲ್ಲಿ ಮಸೂದೆಯೊಂದರ ಕುರಿತು ಮಂಗಳವಾರ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ್ದ ಸದನದ ನಾಯಕ ಪೀಯೂಷ್‌ ಗೋಯಲ್‌ ಅವರು, 'ಅವರನ್ನು ಅವರ ಹಾದಿಗೆ ಬಿಟ್ಟರೆ ದೇಶವನ್ನು ಬಿಹಾರವನ್ನಾಗಿ ಪರಿವರ್ತಿಸುತ್ತಾರೆ' ಎಂದಿದ್ದರು.

         ತಮ್ಮ ಹೇಳಿಕೆಗಾಗಿ ಪೀಯೂಷ್‌ ಗೋಯಲ್‌ ಕ್ಷಮೆ ಕೋರಬೇಕು ಎಂದೂ ವಿರೋಧ ಪಕ್ಷಗಳ ಸದಸ್ಯರು ಪಟ್ಟುಹಿಡಿದರು.

             ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ ಗೋಯಲ್‌, 'ಯಾರೊಬ್ಬರ ಭಾವನೆಗೂ ನೋವುಂಟು ಮಾಡುವ ಉದ್ದೇಶದಿಂದ ಆ ಹೇಳಿಕೆ ನೀಡಿರಲಿಲ್ಲ. ಅದನ್ನು ಹಿಂಪಡೆಯುತ್ತೇನೆ' ಎಂದರು.

               'ರಾಜೀವ್‌ ಗಾಂಧಿ ಫೌಂಡೇಷನ್‌ ಚೀನಾ ರಾಯಭಾರ ಕಚೇರಿಯಿಂದ ₹1 ಕೋಟಿಗೂ ಅಧಿಕ ಮೊತ್ತ ಪಡೆದಿದೆ. ಈಗಿನ ಪರಿಸ್ಥಿತಿಗೆ ಕಾಂಗ್ರೆಸ್‌ ಪಕ್ಷವೇ ಕಾರಣ' ಎಂದೂ ಅವರು ಕಾಂಗ್ರೆಸ್‌ ವಿರು‌ದ್ಧ ಹರಿಹಾಯ್ದರು. ವಿರೋಧ ಪಕ್ಷಗಳ ಸದಸ್ಯರೆಲ್ಲಾ ಒಗ್ಗಟ್ಟಿನಿಂದ ಅವರ ಹೇಳಿಕೆಯನ್ನು ಖಂಡಿಸಿದರು. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

               ಸಭಾಪತಿ ಧನಕರ್‌ ಅವರು ತಮ್ಮ ಆಸನಗಳಿಗೆ ಮರಳುವಂತೆ ವಿರೋಧ ಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿದರು. ಸದನದ ನಾಯಕ ಹಾಗೂ ವಿರೋಧ ಪಕ್ಷದ ನಾಯಕರು ಮಧ್ಯಾಹ್ನ 1 ಗಂಟೆಗೆ ತಮ್ಮನ್ನು ಕಚೇರಿಯಲ್ಲಿ ಭೇಟಿಯಾಗುವಂತೆ ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಏನೇ ಚರ್ಚೆ ನಡೆಸುವುದಿದ್ದರೂ ಸದನದಲ್ಲೇ ನಡೆಸಬೇಕು ಎಂದು ಹೇಳಿದರು.

                 ಕಲಾಪ ಮುಂದೂಡಿಕೆ: ಚೀನಾ ಜೊತೆಗಿನ ಗಡಿ ವಿವಾದದ ಕುರಿತು ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷಗಳು ಪಟ್ಟುಹಿಡಿದ ಕಾರಣ ಲೋಕಸಭೆಯ ಕಲಾಪವನ್ನು ಗುರುವಾರ ದಿನದ ಮಟ್ಟಿಗೆ ಮುಂದೂಡಲಾಯಿತು.

             ಗಡಿ ವಿವಾದವು ಮಹತ್ವದ ವಿಷಯವಾಗಿರುವುದರಿಂದ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.

                 ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್‌ ಗೋಯಲ್‌ ಅವರು ಜನ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ 2022 ಅನ್ನು ಮಂಡಿಸಿದರು.

                                    ಮಾಸ್ಕ್‌ ಧರಿಸಲು ಸಲಹೆ:

            ಲೋಕಸಭೆ ಕಲಾಪಕ್ಕೆ ಗುರುವಾರ ಮಾಸ್ಕ್‌ ಧರಿಸಿ ಬಂದ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರು, ಎಲ್ಲಾ ಸಂಸದರಿಗೂ ಮಾಸ್ಕ್‌ ಧರಿಸುವಂತೆ ಸಲಹೆ ನೀಡಿದರು.

                ಮಾಸ್ಕ್‌ ಧರಿಸಿ ಮತ್ತು ಅಂತರ ಕಾಯ್ದುಕೊಳ್ಳಿ ಎಂದು ರಾಜ್ಯ ಸಭೆಯಲ್ಲೂ ಸಭಾಪತಿ ಜಗದೀಪ್ ಧನಕರ್ ಅವರು ಸಂಸದರಿಗೆ ಸಲಹೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries