ಬದಿಯಡ್ಕ: ಎಡನೀರು ಸಮೀಪದ ಪಾಡಿ ಕೈಲಾರ್ ಶ್ರೀಶಿವ ಕ್ಷೇತ್ರದಲ್ಲಿ ರಾಜಾಂಗಣ ಗೋಪುರದ ಚಪ್ಪರ ಶಿಲಾನ್ಯಾಸ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು, ಪೂಜಾದಿಗಳು ನೆರವೇರಿದವು. ಬಳಿಕ 10.30 ಕ್ಕೆ ನಡೆದ ಸಮಾರಂಭದಲ್ಲಿ ಕ್ಷೇತ್ರದ ಶ್ರೀಹರಿ ಸೇವಾ ಸಮಿತಿ ರಕ್ಷಾಧಿಕಾರಿ ಜಯಸಿಂಹರಾಜ ವರ್ಮ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಇರುವೈಲ್ ಕೇಶವ ತಂತ್ರಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭ ರಾಜಾಂಗಣ ಗೋಪುರಕ್ಕೆ ಕರ್ನಾಟಕ ಹೌಸಿಂಗ್ ಬೋರ್ಡ್ ಬೆಂಗಳೂರಿನ ಹಿರಿಯ ಅಭಿಯಂತರ ಟಿ.ಡಿ.ನಂಜುಡಪ್ಪ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಸಹಾಯಕ ಅಭಿಯಂತರ ತಿಪ್ಪೇಸ್ವಾಮಿ, ಉದ್ಯಮಿ ಮಧುಸೂದನ ಅಯರ್, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಡಾ.ವಿಕ್ರಂ ಭಟ್ ಕಾಸರಗೋಡು, ಕುಮಾರ್ ರಾಜು ಬೆಂಗಳೂರು, ಬ್ರಿಗೇಡಿಯರ್ ಪ್ರಭಾಕರನ್ ನಾಯರ್ ಪಾಡಿ, ಸುರೇಶ್ ರಾಂ ಇಡಯಿಲ್ಯಂ, ರಾಜಗೋಪಾಲ ಕಾಮಲೋನ್, ಸುಕುಮಾರ ಆಲಂಪಾಡಿ, ಕೊಡಿವಳಪ್ಪು ಕೃಷ್ಣನ್ ನಾಯರ್, ಬಿ.ಕೆ.ಕುಟ್ಟಿ ಬೇವಿಂಜೆ, ಎಂ.ಗಂಗಾಧರನ್ ನಾಯರ್, ಸಿ.ಆರ್.ಗಂಗಾಧರನ್ ನಾಯರ್, ಎಂ.ಜೆ.ಹರಿಪ್ರಸಾದ್, ಜಯಶ್ರೀ ಕೆ ಮೊದಲಾದವರು ಉಪಸ್ಥಿತರಿದ್ದರು. ಹರಿಹರ ಸೇವಾ ಸಮಿತಿ ಕಾರ್ಯದರ್ಶಿ ಸಿ.ಕೆ.ವೇಣುಗೋಪಾಲನ್ ಸ್ವಾಗತಿಸಿ, ವಿ.ಎನ್.ರವೀಂದ್ರನ್ ವಂದಿಸಿದರು.