ಕಾಸರಗೋಡು: ಕುಟುಂಬ ಸಹಿತ ಊರಿಗೆ ಸಂಪರ್ಕವಿಲದೆ ನಾಪತ್ತೆಯಾಗಿ ಇಸ್ಲಾಮಿಕ್ ಸ್ಟೇಟ್ಸ್ ಗೆ ಸೇರ್ಪಡೆಗೊಂಡಿರುವರೆಮದು ಶಂಕಿಸಲಾದ ಘಟನೆಗೆ ತಿರುವು ಲಭಿಸಿದ್ದು ಅರೇಬಿಕ್ ಮತ್ತು ಸೂಫಿಸಂ ಅಧ್ಯಯನಕ್ಕಾಗಿ ಯೆಮೆನ್ ಗೆ ಬಂದಿರುವುದಾಗಿ ಕಾಸರಗೋಡು ಮೂಲದ ಶಬೀರ್ ಹೇಳಿಕೆ ನೀಡಿರುವರು. ನಿನ್ನೆಯಷ್ಟೇ ಬಿಡುಗಡೆಯಾದ ವೀಡಿಯೊ ಸಂದೇಶದಲ್ಲಿ, ಅವರು ಯೆಮನ್‍ಗೆ ಆಗಮಿಸುವುದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಶಬೀರ್ ಮತ್ತು ಅವರ ಕುಟುಂಬ ಯೆಮೆನ್ ತಲುಪಿರುವುದನ್ನು ಖಚಿತಪಡಿಸಿದ ನಂತರ, ತನಿಖೆಯನ್ನು ಎನ್ಐಎಗೆ ವಹಿಸಲು ನಿರ್ಧರಿಸಲಾಯಿತು. ಇದರ ನಂತರ ವೀಡಿಯೊ ಸಂದೇಶ ಬಂದಿದೆ.
ಶಬೀರ್ ಮತ್ತು ಆತನ ಕುಟುಂಬ ದುಬೈನಿಂದ ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಚಂದೇರಾ ಪೆÇಲೀಸರಿಗೆ ದೂರು ನೀಡಿದ್ದರು. ಬಳಿಕ ಈ ಘಟನೆ ಸುದ್ದಿಯಾಗಿದೆ. ಆದರೆ ಅವರು ಮತ್ತು ಅವರ ಕುಟುಂಬದವರು ನಾಪತ್ತೆಯಾಗಿದ್ದಾರೆ ಎಂಬ ವರದಿಗಳು ಆಧಾರರಹಿತವಾಗಿವೆ ಎಂದು ಶಬೀರ್ ಹೇಳಿದ್ದಾರೆ. ಪ್ರಸ್ತುತ ಯೆಮೆನ್‍ನ ತಾರಿಮ್‍ನಲ್ಲಿರುವ ದಾರುಲ್ ಮುಸ್ತಫಾ ಕ್ಯಾಂಪಸ್‍ನಲ್ಲಿರುವುದಾಗಿಯೂ, ವಿದ್ವಾಂಸರಾದ ಹಬೀಬ್ ಉಮರ್ ಅವರ ಬಳಿ ಸೂಫಿಸಂ ಮತ್ತು ಅರೇಬಿಕ್ ಅಧ್ಯಯನಕ್ಕಾಗಿ ಇಲ್ಲಿಗೆ ಬಂದಿರುವುದಾಗಿಯೂ ವಿಡಿಯೋದಲ್ಲಿ ಹೇಳಲಾಗಿದೆ. ನಾಲ್ಕು ತಿಂಗಳಿಂದ ಇವರು ಊರಲ್ಲಿರುವ ಕುಟುಂಬದವರನ್ನು ಸಂಪರ್ಕಿಸಿರಲಿಲ್ಲ ಎಂಬ ಸುದ್ದಿ ಸುಳ್ಳು. ಇನ್ನೂ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಯೆಮೆನ್‍ಗೆ ಆಗಮಿಸಲಾಗಿದೆ. ತನಿಖೆಗೆ ಸಹಕರಿಸುವುದಾಗಿ ಶಬೀರ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಮನೆಯವರು ಪೊಲೀಸರಿಗೆ ದೂರು ನೀಡಿದ ಬಳಿಕ ಇದರ ಆಧಾರದ ಮೇಲೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಗುಪ್ತಚರ ಸಂಸ್ಥೆಗಳು ನಡೆಸಿದ ತನಿಖೆಯಲ್ಲಿ ಅವರು ಯೆಮೆನ್ ತಲುಪಿರುವುದು ದೃಢಪಟ್ಟಿತ್ತು. ಅವರು ಇಸ್ಲಾಮಿಕ್ ಸ್ಟೇಟ್ ಸೇರಿರುವ ಸೂಚನೆಗಳೂ ಇದ್ದವು. ಇದರೊಂದಿಗೆ ಎನ್‍ಐಎ ತನಿಖೆಯನ್ನು ಕೈಗೆತ್ತಿಕೊಂಡಿದೆ.
ನಾಪತ್ತೆಯಾದ ಕಾಸರಗೋಡು ಮೂಲದ ಕುಟುಂಬದ ಬಗ್ಗೆ ಕೊನೆಗೂ ಮಾಹಿತಿ ಲಭ್ಯ: ಅರೇಬಿಕ್ ಮತ್ತು ಸೂಫಿಸಂ ಅಧ್ಯಯನ ಮಾಡಲು ಯೆಮೆನ್‍ಗೆ ತೆರಳಿರುವುದಾಗಿ ಹೇಳಿಕೆ: ನಾಪತ್ತೆ ಎಂಬ ವರದಿಗಳು ನಿಜವಲ್ಲ; ವೀಡಿಯೊ ಸಂದೇಶ
0
ಡಿಸೆಂಬರ್ 23, 2022
Tags