ಕಾಸರಗೋಡು: ದಕ್ಷಿಣ ಭಾರತದ ಅತ್ಯುತ್ತಮ ಸ್ವ-ಸಹಾಯ ಗುಂಪು ಎಂಬ ಪ್ರಶಸ್ತಿಯನ್ನು ಪನತ್ತಡಿ ಸಿಡಿಎಸ್ ಪಡೆದುಕೊಂಡಿದೆ. ಕುಂಬಶ್ರೀಯಲ್ಲಿ ಮಹಿಳೆಯರಿಗೆ ಆರ್ಥಿಕ ಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ನಬಾರ್ಡ್ ಸಹಯೋಗದೊಂದಿಗೆ ಅಪ್ಮಾಸ್ (ಆಂಧ್ರಪ್ರದೇಶ ಮಹಿಳಾ ಅಭಿವೃದ್ಧಿ ಸೊಸೈಟಿ) ನೀಡುವ ಸ್ವಸಹಾಯ ಸಂಘಗಳ ಒಕ್ಕೂಟದ ಪ್ರಶಸ್ತಿಯನ್ನು ಪನತ್ತಡಿ ಸಿಡಿಎಸ್ ಪಡೆದುಕೊಂಡಿದೆ.
ತೆಲಂಗಾಣದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎರಬಳ್ಳಿ ದಯಾಕರ್ ರಾವ್ ಪ್ರಶಸ್ತಿ ಪ್ರದಾನಗೈದರು. ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್, ಪನತ್ತಡಿ ಸಿಡಿಎಸ್ ಅಧ್ಯಕ್ಷೆ ಆರ್. ರಜಿನಿ ದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಹ ಸಂಯೋಜಕ ಸಿ. ಎಚ್. ಇಕ್ಬಾಲ್, ಎಸ್. ರವಿತಾ ಪ್ರಶಸ್ತಿ ಸ್ವೀಕರಿಸಿದರು.
ಸುಮಾರು 320 ಸ್ವಸಹಾಯ ಗುಂಪುಗಳ ಸ್ಪರ್ಧೆಯಲ್ಲಿ ಪನತ್ತಡಿ ಸಿಡಿಎಸ್ ಈ ಸಾಧನೆ ಮಾಡಿದೆ. ಕೃಷಿ, ಪಶುಸಂಗೋಪನೆ, ಸಾಲ ಮರುಪಾವತಿ, ಸಣ್ಣ ಕೈಗಾರಿಕೆ, ನೆರೆಹೊರೆ ಗುಂಪು ಮತ್ತು ಬುಡಕಟ್ಟು ಜನಾಂಗದವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಪ್ರಶಸ್ತಿಯು 40,000 ರೂಪಾಯಿ ನಗದು, ಫಲಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.
ದಕ್ಷಿಣ ಭಾರತದ ಅತ್ಯುತ್ತಮ ಸ್ವ-ಸಹಾಯ ಗುಂಪು ಸಂಯೋಜನೆ ಪ್ರಶಸ್ತಿ ಸ್ವೀಕರಿಸಿದ ಪನತ್ತಡಿ ಕುಟುಂಬಶ್ರೀ ಸಿಡಿಎಸ್
0
ಡಿಸೆಂಬರ್ 17, 2022