ಕುಂಬಳೆ: ಭಾರತ ಮಾತಾ ಸೇವಾ ಟ್ರಸ್ಟ್ ಪರಂಬಳ ಕಯ್ಯಾರು ಇದರ ನೇತೃತ್ವದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ, ದುರ್ಗಾವಾಹಿನಿ ಪರಂಬಳ ಕಯ್ಯಾರು ಉಪಖಂಡ ಸಮಿತಿಗಳ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಹಭಾಗಿತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಡಿ.4ರಂದು ಪರಂಬಳ ಕಯ್ಯಾರಿನಲ್ಲಿರುವ ಭಾರತ ಮಾತಾ ಸೇವಾ ಟ್ರಸ್ಟ್‍ನ ಕಾರ್ಯಾಲಯದಲ್ಲಿ ಜರಗಲಿದೆ. ಕಯ್ಯಾರು ಕಜೆ ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ಅಶ್ವಿನ್ ಭಟ್ ಆಟಿಕುಕ್ಕೆ ಪೂಜೆಯ ನೇತೃತ್ವ ವಹಿಸಲಿದ್ದಾರೆ.
ಬೆಳಗ್ಗೆ 7 ಕ್ಕೆ ಗಣಪತಿ ಹೋಮ, 9.30ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 11ಕ್ಕೆ ದುರ್ಗಾಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇವರಿಂದ ಕುಣಿತ ಭಜನೆ, ಮಧ್ಯಾಹ್ನ 12ಕ್ಕೆ ನಡೆಯುವ ಸಭೆಯಲ್ಲಿ ಅಶ್ವಿನ್ ಭಟ್ ಆಟಿಕುಕ್ಕೆ ಮತ್ತು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಬಾಕುಡ ಸಮಾಜ ಸೇವಾ ಸಮಿತಿ ಕೇರಳ ಕರ್ನಾಟಕ ಕೇಂದ್ರ ಸಮಿತಿಯ ಅಧ್ಯಕ್ಷ ವಿಜಯ ಪಂಡಿತ್ ಉಪಸ್ಥಿತರಿರುವರು. 12.30ರಿಂದ ಮಹಾಪೂಜೆ, 1ರಿಂದ ಪ್ರಸಾದ ಭೋಜನ ನೆರವೇರಲಿದೆ.
ನಾಳೆ ಕಯ್ಯಾರಿನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
0
ಡಿಸೆಂಬರ್ 02, 2022