ಕಾಸರಗೋಡು: ಕೇರಳ ಶಾಪ್ಸ್ ಮತ್ತು ಕಮರ್ಷಿಯಲ್ ಎಸ್ಟಾಬ್ಲಿಷ್ಮೆಂಟ್ ವರ್ಕರ್ಸ್ ವೆಲ್ಫೇರ್ ಫಂಡ್ ಬೋರ್ಡ್ ಮತ್ತು ಕೇರಳ ಪ್ಯಾರಾಮೆಡಿಕಲ್ ಲ್ಯಾಬೊರೇಟರಿ ಓನರ್ಸ್ ಫೆಡರೇಶನ್ ನ ಜಿಲ್ಲಾ ಸಮಿತಿ ಜಂಟಿಯಾಗಿ ಲ್ಯಾಬ್ ಮಾಲೀಕರು, ತಂತ್ರಜ್ಞರು ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಕಾಸರಗೋಡು ನಗರಸಭಾ ಸಮ್ಮೇಳನ ಸಭಾಂಗಣದಲ್ಲಿನಡೆಯಿತು.
ಮಾದಕ ವಸ್ತು ವಿರುದ್ಧ ಜಾಗೃತಿ, ಪರೀಕ್ಷಾ ವ್ಯವಸ್ಥೆ ಹಾಗೂ ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತಾದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ವಿ.ಅಬ್ದುಲ್ ಸಲಾಂ ವಿಚಾರಸಂಕಿರಣ ಉದ್ಘಾಟಿಸಿದರು. ಕೆ.ಪಿ.ಅಬುಯಾಸರ್ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಎಂ.ಎ.ಮ್ಯಾಥ್ಯೂ ಮುಖ್ಯ ಅತಿಥಿಯಾಗಿದ್ದರು. ಡಾ.ಪಿ.ಎಂ.ನಿಶಾದ್ ಮತ್ತು ಪಿ.ರಮೇಶ್ ತರಗತಿ ನಡೆಸಿ ಕೊಟ್ಟರು. ಪಿ ವಿ ರಾಧಾಕೃಷ್ಣನ್ ಸ್ವಾಗತಿಸಿದರು. ಸುಶೀಲಾ ಬಾಲಗೋಪಾಲ್ ವಂದಿಸಿದರು.
ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತಾದ ವಿಚಾರ ಸಂಕಿರಣ.
0
ಡಿಸೆಂಬರ್ 28, 2022
Tags