HEALTH TIPS

ಹೊಸ ವರ್ಷದ ವಿಶೇಷ ಪ್ರದರ್ಶನ: ಗುರುವಾಯೂರಿನಲ್ಲಿ ದಮಯಂತಿಯಾಗಲಿರುವ ವಯನಾಡ್ ಕಲೆಕ್ಟರ್: ಸಾಕಾರತೆಯ ಖುಷಿಯಲ್ಲಿ ಬಹುದಿನಗಳ ಕನಸು


             ಪಾಲಕ್ಕಾಡ್: ಹೊಸ ವರ್ಷದ ಆರಂಭ ದಿನದಂದು ಗುರುವಾಯೂರಿನಲ್ಲಿ ನಳಚರಿತದ ಮೊದಲ ದಿನ ಕಥಕ್ಕಳಿ ಆಖ್ಯಾನವೊಂದರಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ದಮಯಂತಿ ಪಾತ್ರ ನಿರ್ವಹಿಸುವ ಮೂಲಕ 'ವಿಐಪಿ' ದಮಯಂತಿಯಾಗಲಿರುವರು.
           ವಯನಾಡ್ ಕಲೆಕ್ಟರ್ ಎ. ಗೀತಾ ದಮಯಂತಿ ಪಾತ್ರ ನಿರ್ವಹಿಸುವರು.  ಪಾಲಕ್ಕಾಡ್ ಮೂಲದವರಾದ ಗೀತಾ ಅವರು ಮೂರನೆ ವಯಸ್ಸಿನಿಂದಲೇ ಭರತನಾಟ್ಯ ಮತ್ತು ಮೋಹಿನಿಯಾಟ್ಟಂ ಕಲಿತಿದ್ದಾರೆ. ಅನೇಕ ರಂಗಗಳಲ್ಲಿ ಗೆಜ್ಜೆಕಟ್ಟಿ ಪ್ರದರ್ಶಿಸಿರುವರು. ಈ ಅನುಭವದಿಂದಲೇ  ಕಥಕ್ಕಳಿ ಕಲಿಯಲು ಪ್ರೇರಣೆಯಾಯಿತೆಮದೂ ಅವರು ತಿಳಿಸಿದ್ದಾರೆ.
          ವಯನಾಡಿನ ಕಥಕ್ಕಳಿ ಕಾರ್ಯಾಗಾರಕ್ಕೆ ಬಂದಿದ್ದ ಪಿಎಸ್‍ವಿ ನಾಟ್ಯಸಂಘದ ಅಧ್ಯಾಪಕ, ಕಥಕ್ಕಳಿ ಮೇರು ಕಲಾವಿದ ಕೊಟ್ಟಾಯಕ್ಕಲ್ ಸಿಎಂ ಉಣ್ಣಿಕೃಷ್ಣನ್ ಅವರಲ್ಲಿ ಆಸಕ್ತಿ ವ್ಯಕ್ತಪಡಿಸಿದರು. ಹಾಗಾಗಿ ಒಂದು ವರ್ಷದ ಹಿಂದೆ ಆನ್‍ಲೈನ್‍ನಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದರು.
            ನಂತರ ಉಣ್ಣಿಕೃಷ್ಣನ್ ವಯನಾಡಿಗೆ ಬಂದು ಕಲಿಸಿದರು. ಜಿಲ್ಲಾಧಿಕಾರಿ ಕೋಟಾಗೆ ಹಲವು ಬಾರಿ ಭೇಟಿ ನೀಡಿದ್ದರು.ಅವರ ಪತಿ ಎಸ್.ಜಯಕುಮಾರ್ ನಾಯರ್, ಮಾಜಿ ಹೆಚ್ಚುವರಿ ಕಾನೂನು ಕಾರ್ಯದರ್ಶಿ. ಅವರ ಪುತ್ರ ಬೆಂಗಳೂರಿನಲ್ಲಿ ಐಟಿ ಅಧಿಕಾರಿ ವಿಶ್ವನಾಥ್ ಬೆಂಬಲ ನೀಡಿದ್ದಾರೆ.
      ಅಧ್ಯಯನ, ಸಾಧನೆ ಎಲ್ಲವೂ ಸರಕಾರದ ವಿಶೇಞ ಅನುಮತಿ ಮೇರೆಗೆ ಪಡೆಯಲಾಗಿದೆ. ದಮಯಂತಿ ಭಾಗದಿಂದ ಹಂಸಂ ಭಾಗದ ಕೊನೆಯವರೆಗಿನ ಕಥೆಯನ್ನು ಗುರುವಾಯೂರಿನಲ್ಲಿ ಸಂಜೆ 7ರಿಂದ 8:30ರ ನಡುವೆ ಪ್ರಸ್ತುತಪಡಿಸಲಾಗುತ್ತದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries