ಕಾಸರಗೋಡು: ಎರ್ನಾಕುಲಂ ಜಿಲ್ಲೆಯ ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್‍ನಲ್ಲಿ ದೃಷ್ಟಿ ವಿಕಲಚೇತನರಿಗಾಗಿ ಕಾಯ್ದಿರಿಸಿದ ಎಚ್ ಎಸ್ ಎಸ್ ಟಿ ಭೂಗೋಳ ಶಾಸ್ತ್ರ ಶಾಶ್ವತ ಹುದ್ದೆಗೆ ನೇಮಕಾತಿ ನಡೆಯಲಿದೆ. ಶೇ.50 ಅಂಕಗಳೊಂದಿಗೆ ಭೂಗೋಳಶಾಸ್ತ್ರದಲ್ಲಿ ಎಂ.ಎಸ್ಸಿ ಅಥವಾ ಎಂ ಎ ಸಮಾಜ ವಿಜ್ಞಾನದಲ್ಲಿ ಬಿ.ಎಡ್ Sಇಖಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕಾಗಿದೆ. ಕೆಲಸದ ಅನುಭವವು ಅಪೇಕ್ಷಣೀಯವಾಗಿದೆ. ದೃಷ್ಟಿ ದೋಶವಿರುವವರ ಅನುಪಸ್ಥಿತಿಯಲ್ಲಿ ಶ್ರವಣದೋಷ ಅಂಗವಿಕಲರನ್ನು ಮತ್ತು ಅವರ ಅನುಪಸ್ಥಿತಿಯಲ್ಲಿ ಇತರ ಅಂಗವಿಕಲರನ್ನು ಪರಿಗಣಿಸಲಾಗುವುದು. 2022 ಜ. 1ನೆ ತಾರೀಕಿಗೆ 40 ವರ್ಷ ಮೀರಿರಬಾರದು. ನಿಗದಿತ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ವಯಸ್ಸು, ಜಾತಿ, ಶೈಕ್ಷಣಿಕ ಅರ್ಹತೆ ಮತ್ತು ಅಂಗವೈಕಲ್ಯವನ್ನು ಸಾಬೀತುಪಡಿಸುವ ಮೂಲ ಪ್ರಮಾಣಪತ್ರಗಳೊಂದಿಗೆ ತಮ್ಮ ಹೆಸರನ್ನು ಡಿಸೆಂಬರ್ 14 ರ ಮೊದಲು ವೃತ್ತಿಪರ ಮತ್ತು ಕಾರ್ಯನಿರ್ವಾಹಕ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರಸ್ತುತ ಕೆಲಸ ಮಾಡುತ್ತಿರುವವರು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರ ನೀಡಿರುವ ಎನ್‍ಒಸಿ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0484 2312944)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ದೃಷ್ಟಿ ವಿಕಲ ಚೇತನರಿಂದ ಅರ್ಜಿ ಆಹ್ವಾನ
0
ಡಿಸೆಂಬರ್ 06, 2022
Tags