ನವದೆಹಲಿ: ಪೈಲಟ್‌ಗಳ ಕೊರತೆ ಇಲ್ಲ. ಆದರೆ, ಕೆಲವು ರೀತಿಯ ವಿಮಾನಗಳಿಗೆ ಕಮಾಂಡರ್ ಗಳ ಕೊರತೆ ಇದೆ. ಅವುಗಳನ್ನು ವಿದೇಶಿ ಪೈಲಟ್ ಗಳ ಸೇವೆ ಬಳಸಿಕೊಂಡು ನಿರ್ವಹಿಸಲಾಗುತ್ತಿದೆ ಎಂದು ಸರ್ಕಾರ ಸೋಮವಾರ ಹೇಳಿದೆ.
ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ವಿ. ಕೆ.
ಸಿಂಗ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ಪ್ರಸ್ತುತ 82 ವಿದೇಶಿ ವಿಮಾನಗಳಿಗೆ ತಾತ್ಕಾಲಿಕ ದೃಢೀಕರಣ (ಎಫ್‌ಎಟಿಎ) ನೀಡಲಾಗಿದೆ. ಕೆಲವು ರೀತಿಯ ವಿಮಾನಗಳಲ್ಲಿ ಟೈಪ್ ರೇಟೆಡ್ ಕಮಾಂಡರ್ / ಪಿಐಸಿ (ಪೈಲಟ್-ಇನ್-ಕಮಾಂಡ್) ಕೊರತೆ ಇದೆ. ವಿದೇಶಿ ವಿಮಾನಗಳಿಗೆ ಎಫ್‌ಎಟಿಎ ನೀಡುವ ಮೂಲಕ ವಿದೇಶಿ ಪೈಲಟ್‌ಗಳನ್ನು ಬಳಸಿಕೊಂಡು ನಿರ್ವಹಿಸಲಾಗುತ್ತಿದೆ ಎಂದರು.
ದೇಶದಲ್ಲಿ 34 ವೈಮಾನಿಕ ತರಬೇತಿ ಸಂಸ್ಥೆಗಳು (ಎಫ್‌ಟಿಒ) ಇದ್ದು, ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್) ಪಡೆಯಲು ವಿಮಾನ ಹಾರಾಟ ತರಬೇತಿ ನೀಡುವ 52 ನೆಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಪೈಲಟ್‌ಗಳಿಗೆ ನಿರ್ದಿಷ್ಟ ವಿಮಾನ ತರಬೇತಿ ನೀಡುವ 7 ಅನುಮೋದಿತ ತರಬೇತಿ ಸಂಸ್ಥೆಗಳು (ಎಟಿಒ) ಸಹ ಇವೆ.