HEALTH TIPS

ಕೊಲೆಸ್ಟರಾಲ್ ಮತ್ತು ಸಕ್ಕರೆ ಅಂಗಳದಾಚೆ: ಹಿತ್ತಲಿನ ನುಗ್ಗೆ ಸೊಪ್ಪು ಈಚೆ: ಹೇಗೆ?


         ನುಗ್ಗೆ ಎಲೆಗಳ ಸೊಪ್ಪಿನಲ್ಲಿ ಅತೀ ಉತ್ಕøಷ್ಟವಾದ ಆರೋಗ್ಯ ವರ್ಧಕವಿರುವುದು ಗ್ರಾಮೀಣರಿಗೆ ಗೊತ್ತು. ಹಳ್ಳಿಗಾಡಿನಲ್ಲಿ ಯಥೇಚ್ಛವಾಗಿ ಸಿಗುವ ನುಗ್ಗೆ ಸೊಪ್ಪು ಸಹಿತ ನುಗ್ಗೆ ಕಾಯಿ ಪದಾರ್ಥಗಳಿಗೆ ಹೆಚ್ಚು ಬಳಸುತ್ತೇವೆ.
       ನುಗ್ಗೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಪ್ರತಿನಿತ್ಯ ನುಗ್ಗೆ ಸೇವನೆ ಒಳ್ಳೆಯದು. ನುಗ್ಗೆ ಕೋಲಿನಂತೆ ಸೊಪ್ಪೂ ಆರೋಗ್ಯಕರ.
          ನುಗ್ಗೆ ಸೊಪ್ಪುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ನುಗ್ಗೆಸೊಪ್ಪು ದೇಹಕ್ಕೆ ಶಕ್ತಿಯನ್ನು ನೀಡಬಲ್ಲವು. ಎಲೆಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಆದ್ದರಿಂದ ಆಯಾಸ ಮತ್ತು ನಿತ್ರಾಣ ನಿವಾರಣೆಯಾಗುತ್ತದೆ.
          ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನುಗ್ಗೆ ತುಂಬಾ ಒಳ್ಳೆಯದು. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ನುಗ್ಗೆಸೊಪ್ಪು ಸೇವನೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು. ಎಲೆಗಳಲ್ಲಿರುವ ಕ್ಲೋರೊಜೆನಿಕ್ ಆಮ್ಲ ಎಂಬ ವರ್ಣದ್ರವ್ಯವು ಇದಕ್ಕೆ ಸಹಾಯ ಮಾಡುತ್ತದೆ.
        ನುಗ್ಗೆಸೊಪ್ಪು  ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಎಲೆಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಹೃದಯ ಸದಾ ಆರೋಗ್ಯಕರವಾಗಿರುತ್ತದೆ.
          ಜೀರ್ಣಕಾರಿ ಅಸ್ವಸ್ಥತೆಗಳಿಂದ ಬಳಲುತ್ತಿರುವ ಜನರು ನಿಯಮಿತವಾಗಿ ನುಗ್ಗೆ  ಸೇವಿಸಬೇಕು. ನುಗ್ಗೆಸೊಪ್ಪು ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಗಳನ್ನು ನಿವಾರಿಸುತ್ತದೆ. ಎಲೆಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಲ್ಲಿ ಒಳಗೊಂಡಿರುವ ಫೈಟೊನ್ಯೂಟ್ರಿಯೆಂಟ್‍ಗಳು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಮುಖ್ಯವಾಗಿದೆ.
          ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳಿಗೆ ಕ್ಯಾಲ್ಸಿಯಂ ಅಗತ್ಯವಿದೆ. ನುಗ್ಗೆ  ಎಲೆಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿವೆ. ಹಾಗಾಗಿ ನುಗ್ಗೆಸೊಪ್ಪು ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ. ಸಂಧಿವಾತವನ್ನು ತಡೆಗಟ್ಟಲು ಮತ್ತು ಆಸ್ಟಿಯೊಪೆÇರೋಸಿಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
      ವಿವಿಧ ರೀತಿಯಲ್ಲಿ ಎಲೆಗಳನ್ನು ಬಳಸಿ ಆಹಾರವಾಗಿ ಬಳಸುವುದನ್ನು ಹಿರಿಯರಿಂದ ಕೇಳಿ ತಿಳಿಯಬಹುದು. ಜೊತೆಗೆ ಎರಡು-ಮೂರು ಜನರಿರುವ ಇಂದಿನ ವಿಭಕ್ತ ಕುಟುಂಬವಾಗಿದ್ದರೂ ಸ್ವಲ್ಪ ಮಾತ್ರದ ಎಲೆಗಳು ಸಾಕಾಗುವುದಿಲ್ಲ. ಎಲೆಗಳು ಅತೀ ಚಿಕ್ಕದಾಗಿರುವುದರಿಂದ ಮತ್ತು ಬೇಗನೆ ಸುಗ್ಗುವುದರಿಂದ ಸಾಕಷ್ಟು ಹೆಚ್ಚಿನ ಸಂಖ್ಯೆಯ ಸೊಪ್ಪುಗಳನ್ನು ಬಳಸಬೇಕು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries