ಕುಂಬಳೆ: ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ದ ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕøತ ನಾಟಕ ಸ್ಪರ್ಧೆಯಲ್ಲಿ ಒಟ್ಟು ಆರು ನಾಟಕಗಳಲ್ಲಿ ಧರ್ಮತ್ತಡ್ಕ ಎ ಯು ಪಿ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ "ಮಾಯಾ ವೃಕ್ಷ:" ಎಂಬ ನಾಟಕಕ್ಕೆ ‘ಎ’ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ ಲಭಿಸಿದೆ. ಹಿರಿಯ ಪ್ರಾಥಮಿಕ ಜನರಲ್ ವಿಭಾಗದಲ್ಲಿ ಇದೇ ನಾಟಕವು ಕನ್ನಡ ಭಾμÉಯಲ್ಲಿ "ಮಿಠಾಯಿ ಮರ" ಎಂಬ ಹೆಸರಿನಲ್ಲಿ ಪ್ರದರ್ಶನಗೊಂಡಿತು. ಒಟ್ಟು ಎಂಟು ನಾಟಕಗಳಲ್ಲಿ ಏಳು ಮಲಯಾಳ ನಾಟಕಗಳೊಂದಿಗೆ ಸ್ಪರ್ಧಿಸಿ ‘ಎ’ ಗ್ರೇಡ್ ನೊಂದಿಗೆ 3ನೆ ಸ್ಥಾನವನ್ನು ಪಡೆಯಿತು. ಪೆರ್ಮುದೆ ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಬಾಲಮಿತ್ರ ಇವರು ಈ ನಾಟಕವನ್ನು ನಿರ್ದೇಶಿಸಿದ್ದರು. ಶಾಲಾ ಪ್ರಬಂಧಕ, ಮುಖ್ಯೋಪಾಧ್ಯಾಯರು,ಅಧ್ಯಾಪಕ ವೃಂದ,ಹಾಗೂ ರಕ್ಷಕವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಧರ್ಮತ್ತಡ್ಕ ಶಾಲೆಗೆ ಪ್ರಶಸ್ತಿ
0
ಡಿಸೆಂಬರ್ 04, 2022
Tags