ಕಾಸರಗೋಡು: ಔದ್ಯೋಗಿಕ ಶಿಕ್ಷಣದ ನಂತರ ಭವಿಷ್ಯದ ಜೀವನವನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದರ ಕುರಿತು ಕಾಸರಗೋಡು ಸರ್ಕಾರಿ ಐಟಿಐಯಲ್ಲಿ ಜಿಲ್ಲಾ ಮಾಹಿತಿ ಕಛೇರಿಯಿಂದ ವೃತ್ತಿ ಮಾರ್ಗದರ್ಶನ ವಿಚಾರ ಸಂಕಿರಣ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಶಶಿಧರನ್ ಪಿಳ್ಳೈ ಉದ್ಘಾಟಿಸಿದರು. ಇಂದು ಪ್ರತಿಯೊಬ್ಬರಿಗೂ ತಮ್ಮ ಗುರಿಗಳನ್ನು ಸಾಧಿಸಲು ಅವಕಾಶವಿದೆ. ಆದರೆ ಗುರಿ ಮುಟ್ಟಬೇಕಾದರೆ ಪ್ರಾಮಾಣಿಕವಾಗಿ ಶ್ರಮಿಸಬೇಕು.ಇದಕ್ಕೆ ದಕ್ಷ ಮಾರ್ಗದರ್ಶನ ಅಗತ್ಯ ಎಂದರು.
ಕಾಸರಗೋಡು ಸರ್ಕಾರಿ ಐಟಿಐ ಪ್ರಾಂಶುಪಾಲ ಜಿ.ಮಧುಸೂದನನ್ ಅಧ್ಯಕ್ಷತೆ ವಹಿಸಿದ್ದರು. ಹೈಯರ್ ಸೆಕೆಂಡರಿ ವಿಭಾಗದ ಕೆರಿಯರ್ ಗೈಡೆನ್ಸ್ ಮತ್ತು ಅಡೋಲೆಸೆಂಟ್ ಕೌನ್ಸೆಲಿಂಗ್ ಸೆಲ್ ರಾಜ್ಯ ಸಂಪನ್ಮೂಲ ವ್ಯಕ್ತಿ ಮೇಸನ್ ಕಲರಿಕ್ಕಲ್ ಎರಡು ಗಂಟೆಗಳ ಕಾಲ ನಡೆದ ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು. ಭವಿಷ್ಯದ ಜೀವನವನ್ನು ಸುರಕ್ಷಿತವಾಗಿರಿಸಲು ಯೋಜನೆ ಮುಖ್ಯವಾಗಿದೆ. ಯೋಜನೆ ಇಲ್ಲದೆ ಜೀವನದಲ್ಲಿ ಸೋಲುವ ಸಾಧ್ಯತೆ ಹೆಚ್ಚು ಎಂದರು. ವೃತ್ತಿಯನ್ನು ಆಯ್ಕೆಮಾಡುವ ಮಾನದಂಡಗಳಲ್ಲಿ ಯೋಗ್ಯತೆ, ಮೌಲ್ಯಗಳು, ಆಸಕ್ತಿಗಳು ಮತ್ತು ಪ್ರಾಮಾಣಿಕತೆ ಸೇರಿವೆ. ಪ್ರತಿಯೊಬ್ಬ ಮನುಷ್ಯನು ಪ್ರತಿಭೆ ಮತ್ತು ನ್ಯೂನತೆಗಳನ್ನು ಹೊಂದಿದ್ದು, ಅವರ ಸಾಮಥ್ರ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೇಸನ್ ಕಲ್ರಿಕ್ಕÀಲ್ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಐಟಿಐ ಕೌನ್ಸಿಲ್ ಪ್ರತಿನಿಧಿ ಮುಹಮ್ಮದ್ ಇರ್ಫಾನ್ ಮಾತನಾಡಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿ, ಸಹಾಯಕ ಮಾಹಿತಿ ಅಧಿಕಾರಿ ಜಿ.ಎನ್.ಪ್ರದೀಪ್ ವಂದಿಸಿದರು.
ವಿದ್ಯಾರ್ಥಿಗಳಿಗೆ ಲಕ್ಷ್ಯ ಪ್ರಾಪ್ತಿಗೆ ವೃತ್ತಿ ಮಾರ್ಗದರ್ಶನ ಸೆಮಿನಾರ್: ಮಾಹಿತಿ ಕಛೇರಿಯಿಂದ ಕಾಸರಗೋಡು ಐ.ಟಿ.ಐ.ನಲ್ಲಿ ವೃತ್ತಿ ಮಾರ್ಗದರ್ಶನ ವಿಚಾರ ಸಂಕಿರಣ
0
ಡಿಸೆಂಬರ್ 09, 2022
Tags