ತಮಿಳುನಾಡು: ಸಮಸ್ಯೆಗೆ ಪರಿಹಾರ ನೀಡುವಾಗ ಆ ಸಮಸ್ಯೆಯೇ ಉಲ್ಬಣಿಸಿದರೆ ಹೇಗಾಗಬಹುದು? ಅಂತಹದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ರೇಬೀಸ್ ಶಿಬಿರದ ವೇಳೆ ದಾಳಿ ಮಾಡಿದ ನಾಯಿ ಹುಚ್ಚೆದ್ದು ಶಿಬಿರಕ್ಕೆ ಬಂದಿದ್ದ ನಾಯಿಗಳನ್ನ ಕಚ್ಚಿ ದಾಂಧಲೆ ಮಾಡಿದೆ.ತಮಿಳುನಾಡಿನ ಕೃಷ್ಣಗಿರಿಯ ಪಿಆರ್ಸಿ ಶಾಲಾ ಆವರಣದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಶಿಬಿರದಲ್ಲಿ ಸಾಕಷ್ಟು ಜನ ಸಾಕು ನಾಯಿಗಳನ್ನ ಕರೆತಂದಿದ್ದರು. ಈ ಸಂದರ್ಭ ಲಸಿಕೆ ಹಾಕಲು ತಂದಿದ್ದ ನಾಯಿ ಹುಚ್ಚೆದ್ದು ರಂಪಾಟ ಮಾಡಿ ಶ್ವಾನ ಪ್ರಿಯರಿಗೆ ಶಾಕ್ ನೀಡಿದೆ. ಅಲ್ಲಿದ್ದ ಇತರೆ ನಾಯಿಗಳನ್ನು ಹಾಗೂ ಜನರನ್ನು ಕಚ್ಚಿದ ನಾಯಿ ಶಿಬಿರದಲ್ಲಿ ಹುಚ್ಚು ಹಿಡಿದಂತೆ ದಾಂಧಲೆ ನಡೆಸಿದೆ. ಅಲ್ಲಿದ್ದವರು ನಾಯಿಯನ್ನು ತಡೆಯಲು ಮುಂದಾದಾಗ ಆ ನಾಯಿ ಜನರ ಮೇಲೆಯೇ ದಾಳಿ ಮಾಡಿದೆ. ಈ ನಾಯಿ, ನಾಲ್ಕು ನಾಯಿಗಳು ಸೇರಿದಂತೆ ಮೂರ್ನಾಲ್ಕು ಜನರ ಮೇಲೆ ದಾಳಿ ಮಾಡಿದೆ.
ರಾಷ್ಟ್ರೀಯ ಕೃಷಿ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಪಶುಸಂಗೋಪನೆ ಇಲಾಖೆ ಆಯೋಜನೆ ಮಾಡಿತ್ತು. ಕಾರ್ಯಕ್ರಮಕ್ಕೆ ಕೃಷ್ಣಗಿರಿ ಜಿಲ್ಲಾಧಿಕಾರಿ ಜಯಚಂದ್ರ ಬಾನುರೆಡ್ಡಿ ಚಾಲನೆ ನೀಡಿದ್ದರು.