ಕುಂಬಳೆ: ಕುಂಬಳೆ ಕರಾವಳಿ ಪೋಲೀಸ್ ಠಾಣೆ ಮತ್ತು ಮಂಗಲ್ಪಾಡಿ ತಾಲೂಕು ಕೇಂದ್ರ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಕುಂಬಳೆ ಕರಾವಳಿ ಪೋಲೀಸ್ ಠಾಣೆಯಲ್ಲಿ ವೈದ್ಯಕೀಯ ಶಿಬಿರ ಮತ್ತು ನೇತ್ರ ತಪಾಸಣೆ ಶಿಬಿರ ಇತ್ತೀಚೆಗೆ ನಡೆಯಿತು.
ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಡಾ.ಮುಹಮ್ಮದ್ ಮುಸ್ತಫಾ ಶಿಬಿರವನ್ನು ಉದ್ಘಾಟಿಸಿ ತಪಾಸಣೆಯ ನೇತೃತ್ವ ವಹಿಸಿದ್ದರು. ಕುಂಬಳೆ ಕರಾವಳಿ ಪೋಲೀಸ್ ನಿರೀಕ್ಷಕ ದಿಲೀಶ.ಕೆ ಅಧ್ಯಕ್ಷತೆ ವಹಿಸಿದ್ದರು. ಸಬ್ ಇನ್ಸ್ ಪೆಕ್ಟರ್ ಕುಂಞÂ ಕೃಷ್ಣನ್ ಸ್ವಾಗತಿಸಿ, ಸಿವಿಲ್ ಪೋಲೀಸ್ ಅಧಿಕಾರಿ ಬಾಬು ಪರಮೇಲ್ ವಂದಿಸಿದರು. ಡಾ.ಸಖಿಯಾ, ಆರೋಗ್ಯ ನಿರೀಕ್ಷಕ ಹರೀಶ್.ಎಂ., ಜೆಪಿಎಚ್‍ಎ ಆನ್ಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಕರಾವಳಿ ಪೋಲೀಸ್ ಸಿಬ್ಬಂದಿ ಹಾಗೂ ಕರಾವಳಿ ನಿವಾಸಿಗಳು ಉಪಸ್ಥಿತರಿದ್ದರು.