ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇಗುಲ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಡೆದ ಸಭಾಕಾರ್ಯಕ್ರಮವನ್ನು ಚಿನ್ಮಯ ಮಿಷನ್‍ನ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಉದ್ಘಾಟಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಬಿ. ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಕ್ಷೇತ್ರ ಪವಿತ್ರವಾಣಿ ರತನ್ ಕುಮಾರ್ ಕಾಮಡ, ಜಯದೇವ ಖಂಡಿಗೆ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಬಿ. ವಿ ಕಕ್ಕಿಲ್ಲಾಯ, ವಿಷ್ಣು ಭಟ್ ಕಕ್ಕೆಪ್ಪಾಡಿ, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಗೋಪಾಲ ಚೆಟ್ಟಿಯಾರ್, ಸಿ. ಎಚ್. ಧರ್ಮಪಾಲನ್, ಎಂ. ರಾಜೀವನ್ ನಂಬಿಯಾರ್, ಬಾಲಕೃಷ್ಣನ್ ನಂಬೀಶನ್, ಕೆ. ಗಿರೀಶ್, ಲಕ್ಷ್ಮಣ ಪೆರಿಯಡ್ಕ, ರಾಮ ಮಾಸ್ಟರ್ ಶಿರಿಬಾಗಿಲು, ಮುರಳಿ ಗಟ್ಟಿ, ಸುರೇಶ, ಜನಾರ್ದನ ಕಣ್ಣನ್, ಗೋಪಾಲನ್ ಮಣಿಯಾಣಿ, ಎಂಟು ಇಲ್ಲಮ್‍ಗಳ ಪ್ರತಿನಿಧಿಗಳು, ನಾಲ್ಕು ಗುತ್ತಿನ ಮುಖಂಡರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾರಾಯಣ ಅಯ್ಯ ಕೊಲ್ಯ ಸ್ವಾಗಸಿದರು.
ಮಧೂರು ದೇಗುಲ ಜೀರ್ಣೋದ್ಧಾರ: ಪೂರ್ವಭಾವೀ ಸಭೆ
0
ಡಿಸೆಂಬರ್ 02, 2022