ಪೆರ್ಲ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಕಾಸರಗೋಡು ಇದರ ಪೆರ್ಲ ವಲಯದ ಕಾಟುಕುಕ್ಕೆ ,ಪಾಣಾಜೆ,ಬೇಂಗಪದವು, ನಲ್ಕ, ಅಡ್ಯನಡ್ಕ, ಬಾಳೆಮೂಲೆ ವಿಭಾಗಗಳ ಪ್ರಗತಿ ಬಂಧು,ಸ್ವಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪೆರ್ಲ ಭಾರತೀ ಸದನದಲ್ಲಿ ಜರಗಿತು.
ಇದರ ಅಂಗವಾಗಿ ವೇದಮೂರ್ತಿ ಚಂದ್ರಶೇಖರ ನಾವಡ ಬಜಕೂಡ್ಲು ಅವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಬಳಿಕ ನಡೆದ ಪದಗ್ರಹಣ ಕಾರ್ಯಕ್ರಮವನ್ನು ದಾಸ ಸಂಕೀರ್ತನಗಾರ ರಾಮಕೃಷ್ಣ ಕಾಟುಕುಕ್ಕೆ ಉದ್ಘಾಟಿಸಿದರು. ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಪುಟ್ಟಪ್ಪ ಕೆ. ಅಧ್ಯಕ್ಷತೆ ವಹಿಸಿದ್ದರು. ಧ,ಗ್ರಾ,ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್,ಮೇಲ್ವಿಚಾರಕ ಶಿವಪ್ರಸಾದ್, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ವೆಂಕಟ್ರಮಣ ಭಟ್ ಎಡಮಲೆ, ಸುಮಿತ್ ರಾಜ್, ಪುμÁ್ಪ ಅಮೆಕ್ಕಳ, ಧ.ಗ್ರಾ.ಯೋಜನಾಧಿಕಾರಿ ಮುಖೇಶ್ ಗಟ್ಟಿ, ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.ಸೇವಾ ಪ್ರತಿನಿಧಿಗಳು, ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಪೆರ್ಲದಲ್ಲಿ ಧ.ಗ್ರಾ.ಯೋಜನೆಯ ನೂತನ ಪದಾಧಿಕಾರಿಗಳ ಪದಗ್ರಹಣ
0
ಡಿಸೆಂಬರ್ 09, 2022
Tags