ಮಗು ಅಳುತ್ತದೆಯೆಂದು ಥಿಯೇಟರ್ ನಿಂದ ಹೊರಹೋಗಬೇಕೆಂದಿಲ್ಲ: ಅಳುವ ಕೋಣೆ ಸಿದ್ಧ
0
ಡಿಸೆಂಬರ್ 04, 2022
ತಿರುವನಂತಪುರಂ: ಥಿಯೇಟರ್‍ಗಳಲ್ಲಿ ಮಗು ಅತ್ತಾಗ ತೊಂದರೆ ಅನುಭವಿಸುತ್ತಿರುವ ತಾಯಂದಿರು ಸಿನಿಮಾ ಥಿಯೆಟರ್ ನಲ್ಲಿ ಅನುಭವಿಸುವ ಸಂಕಷ್ಟ ಇಂದುನಿನ್ನೆಯದಲ್ಲ.
ಇದು ಆಗಾಗ್ಗೆ ತಾಯಿ ಮತ್ತು ಮಗು ಥಿಯೇಟರ್‍ನಿಂದ ಹೊರನಡೆಯಬೇಕಾದ ಸ್ಥಿತಿ ನಿರ್ಮಾಣಮಾಡುತ್ತದೆ. ಆದರೆ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ (ಕೆಎಸ್‍ಎಫ್‍ಡಿಸಿ) ಚಿತ್ರ ವೀಕ್ಷಿಸಲು ಬರುವ ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಮಕ್ಕಳ ಅಳಲು ಪರಿಹರಿಸುವ ಮಾರ್ಗೋಪಾಯ ಸಿದ್ದಪಡಿಸಿದೆ.
ತಿರುವನಂತಪುರಂನ ಕೈರಳಿ ಥಿಯೇಟರ್ ಕಾಂಪ್ಲೆಕ್ಸ್‍ನಲ್ಲಿ ಕ್ರೈಯಿಂಗ್ ರೂಮ್ ಎಂಬ ಕೊಠಡಿಯನ್ನು ಸ್ಥಾಪಿಸಲಾಗಿದೆ. ಪೋಷಕರು ಸಿನಿಮಾ ನೋಡುತ್ತಿರುವಾಗ ಮಗು ಅತ್ತರೆ ಥಿಯೇಟರ್ ನಿಂದ ಹೊರಹೋಗುವ ಬದಲು ಇನ್ಮುಂದೆ ಈ ಕೊಠಡಿಯನ್ನು ಬಳಸಬಹುದು. ಹೊರಗೆ ಸದ್ದು ಕೇಳದ ರೀತಿಯಲ್ಲಿ ಕೈಯಿಂಗ್ರ್ ರೂಂ ನಿರ್ಮಿಸಲಾಗಿದ್ದು, ತೊಟ್ಟಿಲು, ಡಯಾಪರ್ ಬದಲಾಯಿಸುವ ಸೌಲಭ್ಯವೂ ಇದೆ. ಮಗುವಿನೊಂದಿಗೆ ಅಳುವ ಕೋಣೆಯಲ್ಲಿ ಯಾವುದೇ ತೊಂದರೆಯಿಲ್ಲದೆ ಚಲನಚಿತ್ರಗಳನ್ನು ವೀಕ್ಷಿಸಲು ಸೌಲಭ್ಯಗಳನ್ನು ಒದಗಿಸಲಾಗಿದೆ. ಮಗುವನ್ನು ನೋಡಿಕೊಂಡು ಸಿನಿಮಾ ನೋಡಿ ಆನಂದಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗಾಜಿನಿಂದ ಮುಚ್ಚಿದ ಭಾಗದ ಮೂಲಕ ಚಲನಚಿತ್ರವನ್ನು ಸ್ಪಷ್ಟವಾಗಿ ನೋಡಬಹುದು. ಕೋಣೆ ವಿಶಾಲವಾಗಿರುವುದರಿಂದ ಮಗುವಿಗೆ ಅನಾನುಕೂಲವಾಗುವುದಿಲ್ಲ
ಥಿಯೇಟರ್ ನಲ್ಲಿ ಜನಜಂಗುಳಿ, ಗಲಾಟೆ ಹೆಚ್ಚಾಗಿ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಅವರ ಅಳಲು ಆಗಾಗ ಸಿನಿಮಾ ನೋಡಲು ಬರುವ ಇತರರಿಗೆ ತೊಂದರೆಯಾಗುತ್ತದೆ. ಅದಕ್ಕಾಗಿಯೇ ತಾಯಂದಿರು ತಮ್ಮ ಮಕ್ಕಳೊಂದಿಗೆ ಚಿತ್ರಮಂದಿರಕ್ಕೆ ಬರಲು ತುಂಬಾ ಹಿಂಜರಿಯುತ್ತಾರೆ.