ಕೈರೊ: 2022ರ ಆಗಸ್ಟ್‌ನಲ್ಲಿ ಅಮೆರಿಕ ದಾಳಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ನಂಬಲಾದ ಅಲ್ ಕೈದಾ ಸಂಘಟನೆಯ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ 35 ನಿಮಿಷದ ವಿಡಿಯೊವನ್ನು ಅಲ್ ಕೈದಾ ಬಿಡುಗಡೆ ಮಾಡಿದೆ ಎಂದು ಎಸ್‌ಐಟಿಇ ಗುಪ್ತಚರ ಶುಕ್ರವಾರ ತಿಳಿಸಿದೆ.
ವಿಡಿಯೊ ರೆಕಾರ್ಡ್ ಮಾಡಿರುವ ದಿನದ ಸ್ಪಷ್ಟ ಮಾಹಿತಿ ಇಲ್ಲ. ಕಾಬೂಲ್‌ನಲ್ಲಿದ್ದ ಈತನನ್ನು ಅಮೆರಿಕ ಡ್ರೋನ್ ದಾಳಿ ಮೂಲಕ ಹತ್ಯೆ ಮಾಡಿರುವುದಾಗಿ ಹೇಳಿತ್ತು.
'ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜವಾಹಿರಿಯನ್ನು ಪತ್ತೆ ಹಚ್ಚಿ, ಕೊಲ್ಲಲು ನಡೆಸಿದ್ದ ಕಾರ್ಯಾಚರಣೆಯು ಭಯೋತ್ಪಾದನೆ ನಿಗ್ರಹ ಮತ್ತು ಗುಪ್ತಚರ ಸಮುದಾಯದ ತಾಳ್ಮೆ ಮತ್ತು ನಿರಂತರ ಕೆಲಸದ ಪರಿಣಾಮವಾಗಿತ್ತು' ಎಂದು ಅಮೆರಿಕದ ಹಿರಿಯ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ ಕೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್‌ನನ್ನು 2011ರಲ್ಲಿ ಅಮೆರಿಕ ಹತ್ಯೆ ಮಾಡಿತ್ತು. ಆ ಬಳಿಕ, ಅಲ್ ಕೈದಾಕ್ಕೆ ಜವಾಹಿರಿ ಹತ್ಯೆಯು ಅತಿ ದೊಡ್ಡ ಹಿನ್ನಡೆ ಎನ್ನಲಾಗಿತ್ತು.