ಕೊಚ್ಚಿ: ಯಾತ್ರಾರ್ಥಿಗಳ ನೂಕು ನುಗ್ಗಲಿನಿಂದಾಗಿ ಪಂಬಾ ಮತ್ತು ನಿಲಕ್ಕಲ್ ನಲ್ಲಿ ಅಯ್ಯಪ್ಪ ಭಕ್ತರು ಬಸ್ ಸಿಗದೆ ಪರದಾಡಿದರು. ಯಾತ್ರೆಯ ಸಂದರ್ಭದಲ್ಲಿ ಯಾತ್ರಾರ್ಥಿಗಳ ಸಂಭಾವ್ಯ ದಟ್ಟಣೆಯನ್ನು ನಿರೀಕ್ಷಿಸುವಲ್ಲಿ ಸರ್ಕಾರ ಮತ್ತೊಮ್ಮೆ ವಿಫಲವಾಗಿದೆ.
ಕೊನೆಗೆ ಅಯ್ಯಪ್ಪ ಭಕ್ತರು ತಮ್ಮ ಅಳಲನ್ನು ಹೈಕೋರ್ಟ್ ಗೆ ಪತ್ರದ ಮೂಲಕ ತಿಳಿಸಿದಾಗ ಹೈಕೋರ್ಟ್ ಮಧ್ಯ ಪ್ರವೇಶಿಸಿತು.
ಪಂಬಾ ಮತ್ತು ನಿಲಕ್ಕಲ್‍ನಲ್ಲಿ ಸಾಕಷ್ಟು ಕೆಎಸ್‍ಆರ್‍ಟಿಸಿ ಬಸ್‍ಗಳಿವೆ ಎಂದು ಖಚಿತಪಡಿಸಿಕೊಳ್ಳಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಬಸ್ ಹತ್ತಲು ಯಾವುದೇ ತೊಂದರೆಯಾಗದಂತೆ ಪೆÇಲೀಸರು ನೋಡಿಕೊಳ್ಳಬೇಕು. ಮುಂಬಾಗಿಲಿನಿಂದ ಮೊದಲು ಬಸ್ ಹತ್ತಲು ಅವಕಾಶ ನೀಡಬೇಕು. ನಂತರವೇ ಇತರ ಪ್ರಯಾಣಿಕರನ್ನು ಹಿಂಬಾಗಿಲ ಮೂಲಕ ಕರೆದೊಯ್ಯಬೇಕು. ಇಂದೇ ಕ್ರಮ ಕೈಗೊಂಡು ಸೋಮವಾರ ವರದಿ ಸಲ್ಲಿಸುವಂತೆಯೂ ಹೈಕೋರ್ಟ್ ಹೇಳಿದೆ.
ಈ ಬಗ್ಗೆ ವಿವರಣೆ ನೀಡುವಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ದೇವಸ್ವಂ ಪೀಠ ಸೂಚಿಸಿತ್ತು.
ಅಯ್ಯಪ್ಪ ಭಕ್ತರ ನೂಕು ನುಗ್ಗಲು ಮುಂಗಾಣಲಾಗದ ಸರ್ಕಾರ: ಹೈಕೋರ್ಟ್ ಮಧ್ಯ ಪ್ರವೇಶ
0
ಡಿಸೆಂಬರ್ 04, 2022