ಮಂಜೇಶ್ವರ: ಲೋಕದ ಸಮಸ್ತ ಜೀವ ರಾಶಿಗಳಿಗೆ ಸನ್ಮಂಗಳ ಉಂಟುಮಾಡಲು ಮಂಗಳೂರಿನ ಪ್ರಭಾತ್ ಕರಿಯಪ್ಪ ಪೂಜಾರಿ ಎಂಬವರು ಜಮ್ಮು ಕಾಶ್ಮೀರದ ವೈμÉ್ಣೂೀದೇವಿಯಿಂದ ಇರುಮುಡಿ ಕಟ್ಟಿ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದು, ಸೋಮವಾರ ಕೇರಳ ರಾಜ್ಯ ಪ್ರವೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಮಂಜೇಶ್ವರ ತಾಲೂಕಿನ ವಿವಿಧ ರಾಜಕೀಯ ಸಾಮಾಜಿಕ ಧಾರ್ಮಿಕ ನೇತಾರರು ಹೊಸಂಗಡಿಯಲ್ಲಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಹೊಸಂಗಡಿ ಅಯ್ಯಪ್ಪ ಭಜನಾ ಮಂದಿರದ ಅಯ್ಯಪ್ಪ ಸ್ವಾಮಿಗಳು ಪಾದಯಾತ್ರೆ ಮಾಡುತ್ತಿರುವ ಪ್ರಭಾತ್ ಅವರನ್ನು ಬರಮಾಡಿಕೊಂಡರು.
ನಾಗರಿಕರ ಪರವಾಗಿ ಮಾತನಾಡಿದ ಸಾಮಾಜಿಕ ನೇತಾರ ಡಿಎಂಕೆ ಮೊಹಮ್ಮದ್ ಅವರು, ಸಮಸ್ತ ಜೀವ ರಾಶಿಗಳಿಗೆ ಸನ್ಮಂಗಳ ಉಂಟುಮಾಡಲು ಪ್ರಭಾತ್ ಅವರು ನಡೆಸುತ್ತಿರುವ ಈ ಪಾದಯಾತ್ರೆ ಶ್ಲಾಘನೀಯವಾಗಿದ್ದು ಸಮಸ್ತ ನಾಗರಿಕರ ಪರವಾಗಿ ಪ್ರಭಾತ್ ಅವರನ್ನು ಕೇರಳ ರಾಜ್ಯಕ್ಕೆ ಸ್ವಾಗತಿಸುತ್ತಾ ಅವರ ಪಾದಯಾತ್ರೆಯು ಸುಲಭ ರೀತಿಯಲ್ಲಿ ನಡೆದು ಶಬರಿಮಲೆಯ ಸ್ವಾಮಿ ಅಯ್ಯಪ್ಪನ ದಿವ್ಯ ದರ್ಶನ ಉತ್ತಮ ರೀತಿಯಲ್ಲಿ ಆಗಲಿ ಎಂದು ಹಾರೈಸಿದರು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಉದಯ್ ಪಾವಳ, ಲಕ್ಷ್ಮಣ ಪ್ರಭು ಕುಂಬಳೆ, ಜೆಸ್ಸಿ ಹೊಸಂಗಡಿ, ಜೌರ ಕಡಂಬಾರು, ಸೋಮಪ್ಪ ಮೀಂಜ, ದಿವಾಕರ ಮಜೀರ್ಪಳ್ಳ, ಹನೀಫ್ ಮಂಜೇಶ್ವರ, ರಾಜೇಶ್ ಅಮ್ಮ ಲಾಟರಿ, ರಾಜು ಅಮ್ಮ ಲಾಟರಿ, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಇರ್ಶಾದ್ ಮಂಜೇಶ್ವರ, ಭರತ್, ಪ್ರಮೋದ್ , ಅಝರ್, ಕಮಲೇಶ್, ಬಾಲಸ್ವಾಮಿ, ಸಾಬು ಚೇರ್ತಲ ಮುಂತಾದವರು ಭಾಗವಹಿಸಿದರು.
ವೈಷ್ಣೋದೇವಿಯಿಂದ ಶಬರಿಮಲೆಗೆ ಪಾದಯಾತ್ರೆ: ಮಂಗಳೂರಿನ ಪ್ರಭಾತ್ ಕರಿಯಪ್ಪ ಪೂಜಾರಿ ಅವರಿಗೆ ಮಂಜೇಶ್ವರದಲ್ಲಿ ಸ್ವಾಗತ
0
ಡಿಸೆಂಬರ್ 19, 2022