ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಕೇರಳ ಹಾಕಿ ಅಸೋಸಿಯೇಶನ್ ವತಿಯಿಂದ ಹಾಕಿ ಸ್ಟಿಕ್ ವಿತರಣೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕೇರಳ ಒಲಿಂಪಿಕ್ ಅಸೋಸಿಯೇಶನ್ ನ ಜಿಲ್ಲಾ ಕಾರ್ಯದರ್ಶಿ ಎಂ. ಅಚ್ಚುತನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಸರಗೋಡು ಹಾಕಿ ಅಸೋಸಿಯೇಶನ್‍ನ ಪ್ರಭಾರ ಕಾರ್ಯದರ್ಶಿ ಎ. ವಿ. ಪವಿತ್ರನ್, ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್, ಪ್ರಾಂಶುಪಾಲ ರಾಮಚಂದ್ರ ಭಟ್ ಶುಭಾಶಂಸನೆಗೈದರು. ಧರ್ಮತ್ತಡ್ಕ ಶಾಲಾ ನಿವೃತ್ತ ದೈಹಿಕ ಶಿಕ್ಷಕ ಅಶೋಕನ್ ಎನ್. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುತ್ತಿಗೆ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜೋನ್ ಡಿ ಸೋಜ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ಭಟ್ ಸ್ವಾಗತಿಸಿ, ದೈಹಿಕ ಶಿಕ್ಷಕ ಸಂತೋಷ್ ಕುಮಾರ್ ಎಂ. ವಂದಿಸಿದರು. ಅಧ್ಯಾಪಿಕೆ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.
ಧರ್ಮತಡ್ಕ ಶಾಲೆಯಲ್ಲಿ ಮಕ್ಕಳಿಗೆ ಹಾಕಿ ಸ್ಟಿಕ್ ವಿತರಣೆ
0
ಡಿಸೆಂಬರ್ 06, 2022
Tags