ಕಾಸರಗೋಡು: ನ್ಯಾಶನಲ್ ವಿಶ್ವಕರ್ಮ ಫೆಡರೇಶನ್(ಎನ್‍ವಿಎಫ್)ಕಾಸರಗೋಡು ಜಿಲ್ಲಾ ಸಮಿತಿಯ 13ನೇ ವರ್ಷದ ಕುಟುಂಬ ಸಂಗಮ, ಪ್ರತಿಭಾ ಪುರಸ್ಕಾರ ಸಮಾರಂಭ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಿತು..
ಎನ್‍ವಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸೀತಾರಾಮ ಆಚಾರ್ಯ ಸಮಾರಂಭ ಉದ್ಘಾಟಿಸಿದರು. ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ರಾಘವನ್ ದೊಡ್ಡುವಯಲ್ ಅಧ್ಯಕ್ಷತೆ ವಹಿಸಿದ್ದರು. ಎನ್‍ವಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಘವನ್ ಕೊಳತ್ತೂರ್ ಸಂಘಟನಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸೊಸೈಟಿ ನಿರ್ದೇಶಕರಾದ ವಿ.ಕೆ ಉಪೇಂದ್ರ ಆಚಾರಿ ವಯಲಾಂಕುಳಿ, ವಿ.ಕೆ ರಾಜಪ್ಪನ್, ವಿ. ಚಂದ್ರನ್, ವಿಷ್ಣು ಆಚಾರ್ಯ, ರಾಘವನ್ ಎ, ಪಿ.ಕೆ ವಿಜಯನ್, ವಾಸಂತಿ ಜೆ, ಓಮನ ಕೆ.ಜಿ, ವನಿತಾ ಕೆ.ಟಿ, ಪದ್ಮಾವತೀ ಕೆ. ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಜಯರಾಜನ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ನಿರ್ದೇಶಕ ಬಿ. ವಾಮನ ಆಚಾರ್ಯ ಸ್ವಾಗತಿಸಿದರು. ಸೊಸೈಟಿ ಉಪಾಧ್ಯಕ್ಷ ಪಿ.ರಾಘವನ್ ವಂಧಿಸಿದರು.
ಈ ಸಂದರ್ಭ ಕಳೆದ ವರ್ಷ ಎಸ್ಸೆಸೆಲ್ಸಿ, ಪ್ಲಸ್‍ಟು ವಿಭಾಗದಲ್ಲಿ ಎಲ್ಲ ವಿಷಯಗಳಲ್ಲಿ 'ಎ'ಪ್ಲಸ್ ಶ್ರೇಣಿಯೊಂದಿಗೆ ಉತ್ತೀರ್ಣರಾದ ಸಮಾಜನ ವಿದ್ಯಾರ್ಥಿಘಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಎನ್.ವಿ.ಎಫ್. ವಿಶ್ವಕರ್ಮ ಕುಟುಂಬ ಸಂಗಮ, ಪ್ರತಿಭಾ ಪುರಸ್ಕಾರ ಸಮಾರಂಭ
0
ಡಿಸೆಂಬರ್ 13, 2022
Tags