ಕುಂಬಳೆ: ಮೊಗ್ರಾಲ್‍ನಲ್ಲಿ ಡಿ. 9 ರಿಂದ 11 ರವರೆಗೆ ನಡೆಯಲಿರುವ ರಾಜ್ಯ ಸಬ್ ಜೂನಿಯರ್ ಬಾಲಕರ (16 ವರ್ಷದೊಳಗಿನವರ) ಹಾಕಿ ಚಾಂಪಿಯನ್‍ಶಿಪ್ ಸಂಬಂಧಿ ಆಮಂತ್ರಣಪತ್ರಿಕೆಯನ್ನು ಭಾನುವಾರ ಸಂಘಟನಾ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಉದ್ಯಮಿ ಪಿ.ಕೆ.ಮುನೀರ್ ಹಾಜಿ, ಕಾಸರಗೋಡು ರೋಟರಿ ಕ್ಲಬ್ ಅಧ್ಯಕ್ಷ ಹಮೀದ್ ಹಾಗೂ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕದ ಅಧ್ಯಕ್ಷ ವಿಕ್ರಂ ಪೈ ಸಂಯುಕ್ತವಾಗಿ ಬ್ರೋಷರ್ ಬಿಡುಗಡೆಗೊಳಿಸಿದರು. ಕುಂಬಳೆ ಗ್ರಾ.ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕೆ. ಎಂ ಅಬ್ಬಾಸ್, ಹಾಕಿ ಅಸೋಸಿಯೇಶನ್ ಜಿಲ್ಲಾ ಪದಾಧಿಕಾರಿಗಳಾದ ಅಚ್ಯುತನ್ ಮಾಸ್ತರ್, ಎ. ವಿ ಪವಿತ್ರನ್, ಬಿಎನ್ ಮಹಮ್ಮದ್ ಅಲಿ, ಟಿ. ಎಂ.ಶುಹೈಬ್, ಎ.ಕೆ.ಆರಿಫ್, ಬಿ.ಎ.ರಹಮಾನ್, ಕೆ.ವಿ.ಯೂಸುಫ್ ಅಲಿ ಕುಂಬಳೆ, ತಾಜುದ್ದೀನ್ ಮೊಗ್ರಾಲ್, ನಜೀಬ್ ಎಂ.ಎ., ಎಂ.ಜಿ.ಅಬ್ದುಲ್ ರಹಮಾನ್ ಮೊದಲಾದವರಿದ್ದರು. ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಅಶ್ರಫ್ ಕಾರ್ಲೆ ಮಾತನಾಡಿ ಮಾಹಿತಿ ನೀಡಿದರು. ಪ್ರಚಾರ ಸಮಿತಿ ಅಧ್ಯಕ್ಷ ಜೆಡ್ ಎ. ಮೊಗ್ರಾಲ್ ಸ್ವಾಗತಿಸಿ, ವಂದಿಸಿದರು.
ರಾಜ್ಯಮಟ್ಟದ ಸಬ್ ಜೂನಿಯರ್ ಹಾಕಿ ಚಾಂಪಿಯನ್ ಶಿಪ್: ಕರಪತ್ರ ಬಿಡುಗಡೆ
0
ಡಿಸೆಂಬರ್ 06, 2022