ಕಾಸರಗೋಡು: ಬೇಕಲ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಕಾಸರಗೋಡಿನ ಪ್ರವಾಸೋದ್ಯಮದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿರುವುದಾಗಿ ಎಂದು ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್. ಕುಞಂಬು ತಿಳಿಸಿದ್ದಾರೆ.
ಅವರು ಬೇಕಲದ ಉತ್ಸವ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉತ್ಸವದ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು. ಉತ್ಸವಕ್ಕೆ ಜಾತಿ, ಧರ್ಮ ಭೇದವಿಲ್ಲದೇ ಎಲ್ಲ ವರ್ಗದ ಜನರಿಂದ ಸಹಕಾರ, ಬೆಂಬಲ ವ್ಯಕ್ತವಾಗುತ್ತಿದೆ. ಗೃಹ ಸಚಿವಾಲಯದ ಪ್ರಕಾರ, ಉತ್ಸವವನ್ನು ವಿಸ್ತರಿಸುವ ಬೇಡಿಕೆಯಿದ್ದರೂ, ಈ ಹಿಂದೆ ನಿಗದಿಯಾದಂತೆ ಜನವರಿ 2 ರಂದು ಉತ್ಸವ ಕೊನೆಗೊಳ್ಳಲಿದೆ. ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಮಹಮ್ಮದ್ ರಿಯಾಸ್ ಅವರ ಅಭಿಪ್ರಾಐದಂತೆ ಮುಂದಿನ ವರ್ಷಗಳಲ್ಲಿಯೂ ಬೀಚ್ ಫೆಸ್ಟ್ ಮುಂದುವರಿಯಲಿದೆ.
ಬೇಕಲ ಬೀಚ್ ಉತ್ಸವದ ಯಶಸ್ಸಿನಲ್ಲಿ ಕುಟುಂಬಶ್ರೀ ಕಾರ್ಯಕರ್ತರ ಸಹಭಾಗಿತ್ವ ಮಹತ್ತರವಾಗಿದ್ದು, 1 ಕೋಟಿ ರೂ.ಗಳ ಟಿಕೆಟ್ ಮಾರಾಟ ಮಾಡುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದಾರೆ. ಹಸಿರು ಕ್ರಿಯಾ ಸೇನೆಯ ನೂರಕ್ಕೂ ಹೆಚ್ಚು ನೌಕರರು ಕೈಗೊಂಡಿರುವ ಸ್ವಚ್ಛತಾ ಕಾರ್ಯಗಳಿಂದ ಬೇಕಲ ಪ್ರದೇಶ ಶುಚೀಕರಣಕ್ಕೂ ಮಾದರಿಯಾಗಿದೆ.
ಬಿ.ಆರ್.ಡಿ. ಸಿಎಂಡಿ ಪಿ.ಶಿಜಿನ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಹಾಕಿಂ ಕುನ್ನಿಲ್, ಕೆ.ಇ. ಎ. ಬಕ್ಕರ್, ಟಿ. ಟಿ. ಸುರೇಂದ್ರನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಸಾಧ್ಯತೆ ಹೆಚ್ಚಿಸಿದ ಬೇಕಲ್ ಫೆಸ್ಟ್-ನಾಳೆ ಸಮಾರೋಪ
0
ಡಿಸೆಂಬರ್ 31, 2022
Tags