ನವದೆಹಲಿ: ಕೇಂದ್ರ ಕೃಷಿ ಇಲಾಖೆ ಮತ್ತು ಇಸ್ರೋ ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳು ಮತ್ತು ಅದಕ್ಕೆ ಸಂಬಂಧಿತ ಡೇಟಾಬೇಸ್‌ಗಳನ್ನು ಬಳಸಿಕೊಂಡು ಕೃಷಿ-ನಿರ್ಧಾರ ಬೆಂಬಲ ವ್ಯವಸ್ಥೆಯನ್ನು (ಕೃಷಿ-ಡಿಎಸ್‌ಎಸ್) ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ.
ಕೃಷಿ ಇಲಾಖೆ ಗತಿ ಶಕ್ತಿಯ ರೀತಿಯಲ್ಲಿ ಇಸ್ರೋದ RISAT-1A ಮತ್ತು VEDAS ಉಪಗ್ರಹಗಳನ್ನು ಬಳಸಿಕೊಂಡು ಕೃಷಿ-DSS ಅನ್ನು ಅಭಿವೃದ್ಧಿಪಡಿಸುತ್ತಿದೆ. ಕೃಷಿಕರ ಸಾಕ್ಷ್ಯ ಆಧಾರಿತವಾಗಿ ನಿರ್ಧಾರ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸರಳವಾಗಿ ಹೇಳುವುದಾದರೆ ಉಪಗ್ರಹಳು ಹವಾಮಾನ, ಭೂಮಿಯ ಫಲವತ್ತತೆ, ತೇವಾಂಶ ಮುಂತಾದ ಮಾಹಿತಿಗಳನ್ನು ಕೃಷಿಕರಿಗೆ ಸಿಗುವಂತೆ ಮಾಡುತ್ತದೆ. ಇದು ನಮ್ಮ ರೈತರಿಗೆ ಹೊಸತಗಿ ಬಿತ್ತನೆ ಮಾಡಬೇಕೋ ಬೇಡವೋ, ಕಟಾವಿನ ಸಮಯಕ್ಕೆ ಏನಾದರೂ ಹವಾಮಾನ ಸಮಸ್ಯೆಗಳು ಎದುರಾಗುತ್ತಾ ಎನ್ನುವಂತಹ ಅತ್ಯಗತ್ಯ ಮಾಹಿತಿಗಳನ್ನು ನೀಡುತ್ತದೆ. ಇದರಿಂದ ಬಹಳಷ್ಟು ಸಂದರ್ಭದಲ್ಲಿ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು. ಅದಲ್ಲದೇ, ಅನೇಕ ಸಂದರ್ಭಗಳಲ್ಲಿ ರೈತನ ಇಳುವರಿಯೂ ಹೆಚ್ಚಾಗುತ್ತೆ.
ಒಪ್ಪಂದದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ 'ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಾಗುತ್ತಿದೆ. ಬಾಹ್ಯಾಕಾಶ ವಿಜ್ಞಾನದ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಪ್ರಾರಂಭಿಸಲಾಗುತ್ತಿದೆ. ಕೃಷಿ ಇಲಾಖೆ ಮತ್ತು ಇಸ್ರೋ ನಡುವಿನ ಒಪ್ಪಂದ ಕೃಷಿ ಕ್ಷೇತ್ರಕ್ಕೆ ಹಚ್ಚಿನ ಬಲ ನೀಡಲಿದೆ. ಈ ಜ್ಞಾನ ರೈತರಿಗೆ ತಲುಪಿದರೆ ಅವರ ಇಳುವರಿ ಸಾಮರ್ಥ್ಯ ಹೆಚ್ಚುತ್ತದೆ. ಬೆಳೆಯ ಗುಣಮಟ್ಟವೂ ಹೆಚ್ಚಿ ರಫ್ತು ಮಾಡುವ ಅವಕಾಶಗಳೂ ಹೆಚ್ಚುತ್ತವೆ' ಎಂದರು.